ಮಂಗಳೂರು, ಡಿ. 11 (DaijiworldNews/AA): ಸ್ಪಂದನ ಸಂಸ್ಥೆ ಇನ್ಫೆಂಟ್ ಮೇರಿಸ್ ಕಾನ್ವೆಂಟ್, ಜೆಪ್ಪು, ಮಂಗಳೂರು ಇದರ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಆಚರಣೆಯನ್ನು ಡಿಸೆಂಬರ್ 10ರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.























ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಪಿ. ನೊರೊನ್ಹಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೇನ್ ಮರಿಯ ನಳಿನಿ ಸಲ್ಡಾನಾ, ಗೌರವ ಅತಿಥಿಗಳಾಗಿ ಭಗಿನಿ ಇವ್ಯಾಂಜೆಲಿನ್ ಮಿನೇಜಸ್ ಹಾಗೂ ಭಗಿನಿ ಹೆಲೆನ್ ಫೆರ್ನಾಂಡಿಸ್ ಮತ್ತು ಅತಿಥಿಗಳಾಗಿ ವಿಕ್ಟರ್ ವಾಸ್, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಲಿಡ್ವಿನ್ ಹಾಗೂ ಸ್ಪಂದನ ಸಂಸ್ಥೆಯ ಆಡಳಿತಾಧಿಕಾರಿ ಭಗಿನಿ ಫ್ಲೋರಿನ್ ಪಾಯ್ಸ್ ಭಾಗವಹಿಸಿದ್ದರು.
ಭಗಿನಿ ಫ್ಲೋರಿನ್ ಪಾಯ್ಸ್ ರವರು ನೆರೆದಿರುವ ಎಲ್ಲಾ ಗಣ್ಯ ವ್ಯಕ್ತಿ ಹಾಗೂ ಸಭಿಕರೆಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಎಂಪಿ ನೊರೊನ್ಹಾರವರು ಮಾನವ ಹಕ್ಕುಗಳ ಬಗ್ಗೆ ಕೆಲವು ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಯಾದ ಜೇನ್ ಮರಿಯ ನಳಿನಿ ಸಲ್ಡಾನ್ಹಾ ಅವರು ಮಹಿಳೆಯರನ್ನು ಎಲ್ಲಾ ಕ್ಷೇತ್ರದಲ್ಲಿ ಹೇಗೆ ಮುಂದುವರೆಯಲು ಸಾಧ್ಯ ಎಂಬ ಬಗ್ಗೆ ಕೆಲವು ಕಿವಿ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 850 ಮಂದಿ ಸ್ವ-ಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಕುಮಾರಿ ಡಿಯೋನ ಮ್ಯೂರಲ್ ಪಾಯ್ಸ್, ಕುಮಾರಿ ಜೆಸ್ಸಿಕಾ ಶೈನಾ ಡಿಸೋಜಾ ಹಾಗೂ ಸಂಘದ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಕೊನೆಯಲ್ಲಿ ಸಾಂತಾಕ್ಲಾಸಿನ ಆಗಮನ ಎಲ್ಲರ ಮನಸ್ಸು ಗೆದ್ದಿತು.
ಸೆಲಿನ್ ಡಿಸೋಜಾ ಮತ್ತು ರೇಶ್ಮಾ ವಿಲ್ಮಾ ಡಿಸೋಜಾರವರು ಕಾರ್ಯಕ್ರಮದ ನಿರೂಪಿಸಿದರು.