ಮಂಗಳೂರು, ಡಿ. 09 (DaijiworldNews/AA): ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಪ್ರಯುಕ್ತ 'ನಶೆ ಮುಕ್ತ ಮಂಗಳೂರು' ಅಭಿಯಾನವನ್ನು ಡಿಸೆಂಬರ್ 27 ರಂದು 102 ಕಾರ್ಯಕ್ರಮಗಳ ಸಹಿತ ಬೃಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಿದೆ.





ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸನ್ಮಾನ್ಯ ಕರ್ನಾಟಕ ರಾಜ್ಯ ಸಬಾಧ್ಯಕ್ಷರಾದ ಯುಟಿ ಖಾದರ್, ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಹಿತ ಹಲವು ಗಣ್ಯರು ಉಪಸ್ಥಿತರಿರುತ್ತಾರೆ. ವಿಶೇಷವಾಗಿ ಮಂಗಳೂರು ಬಿಷಪ್, ರಾಮಕೃಷ್ಣ ಮಟದ ಸ್ವಾಮೀಜಿಗಳು ಮತ್ತು ಮಂಗಳೂರು ಖಾಝಿಗಳನ್ನೊಳಗೊಂಡು ಹಲವು ಧಾರ್ಮಿಕ ಮುಖಂಡರು ಅಭಿಯಾನದೊಂದಿಗೆ ಸೇರಿಕೊಳ್ಳಲಿದ್ದಾರೆ ಹಾಗೂ ನಮ್ಮ ತುಳುನಾಡಿನ ಪ್ರಸಿದ್ದ ನಟರು ನಮ್ಮೊಂದಿಗೆ ಕೈ ಜೋಡಿಸಲಿದ್ದಾರೆ. ಈ ಕಾರ್ಯಕ್ರಮವು ವಿಶೇಷವಾಗಿ ಯುವಕರಿಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಿದ್ದು ಇದರ ಅಂಗವಾಗಿ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಿದೆ.
ವಿವರಗಳು ಈ ಕೆಳಗಿನಂತಿವೆ-
ರೀಲ್ & ಶಾರ್ಟ್ ವಿಡಿಯೋ ಸ್ಪರ್ಧೆ; ಪ್ರಸ್ತುತ ಶೈಲಿಯಲ್ಲಿ ಯುವಕೇಂದ್ರಿತವಾಗಿ 30-60 ಸೆಕೆಂಡುಗಳ ರೀಲ್ ಅಥವಾ ಶಾರ್ಟ್ ವಿಡಿಯೋ ತಯಾರಿಸಿ, ಮಾದಕ ದ್ರವ್ಯದ ಹಾನಿ ಮತ್ತು ಜಾಗೃತಿ ಸಂದೇಶ ಜನರಿಗೆ ತಲುಪಿಸುವುದು.
ಮಾದಕಮುಕ್ತ ಇನೋವೇಶನ್ ಮಾದರಿ ಪ್ರದರ್ಶನ; ಅಂತರ್ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ಮುಕ್ತ ಮಂಗಳೂರಿನ ಮಾದರಿಗಳು ಅಥವಾ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ.
ಪೇಪರ್ ಪ್ರೆಸೆಂಟೇಶನ್; ಮಾದಕ ದ್ರವ್ಯದ ತಡೆಗೆ ಹೊಸ ಚಿಂತನೆಯ ಬಗ್ಗೆ ಪ್ರಬಂದ ಬರೆದು ಆಯ್ದ ಪ್ರಬಂಧ ಮಂಡನೆ ಮಾಡುವುದು.
ಫಿಟ್ನೆಸ್ ಚಾಲೆಂಜ್; ಮಂಗಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ನಡೆಸಲಾಗುವುದು.
ಡಿಜಿಟಲ್ ಪೋಸ್ಟರ್ ಸ್ಪರ್ಧೆ; ಸೃಜನಾತ್ಮಕ ಡಿಜಿಟಲ್ ಪೋಸ್ಟರ್ ಮೂಲಕ ಮಾದಕ ಮುಕ್ತ ಜಾಗೃತಿ ಮೂಡಿಸಲು ಅವಕಾಶ.
ಒನ್ ಡೇ ಇನ್ಫ್ಲೂಯೆನ್ಸರ್: ಕ್ರಿಯೇಟಿವ್ ಕಂಟೆಂಟ್ ಮುಖಾಂತರ ಸಮಾಜಕ್ಕೆ ಇನ್ಫ್ಲೂಯೆನ್ಸರ್ ಆಗಿ ಮಾದಕ ಮುಕ್ತ ಸಂದೇಶ ಹರಡುವ ಅಭ್ಯಾಸಕ್ಕಾಗಿ ಈ ಕಾರ್ಯಕ್ರಮ.
ಫ್ಲಾಶ್ ಮೋಬ್; ಸಂಗೀತ ಮತ್ತು ನೃತ್ಯದ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಜಾಗೃತಿ ಕಾರ್ಯಕ್ರಮ
ಈ ಕಾರ್ಯಕ್ರಮವು ಯುವಕರಲ್ಲಿ ಮಾದಕದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೃಜನಾತ್ಮಕ ಸಮಾಜವನ್ನು ಕಟ್ಟುವ ಉದ್ದೇಶವನ್ನು ಹೊಂದಿದ್ದು ಅಭಿಯಾನದ ಉದ್ಘಾಟನೆಯು ಡಿಸೆಂಬರ್ 27 ರಂದು ಟಿ.ಎಂ.ಎ.ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್, ಮಂಗಳೂರಲ್ಲಿ ನಡೆಯಲಿದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು, ಮುಖ್ಯವಾಗಿ ವಿದ್ಯಾರ್ಥಿಗಳು ಭಾಗವಹಿಸಲು ಆಹ್ವಾನಿಸಲಾಗಿದೆ. ತಾವು ಈ ಪ್ರಕಟಣೆಯನ್ನು ವರದಿ ಮಾಡಬೇಕಾಗಿ ವಿನಂತಿಸುತ್ತೇವೆ. ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಕಾರ್ಯಕ್ರಮದ 3 ದಿನ ಮುಂಚಿತವಾಗಿ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದ್ದು ಅದಕ್ಕೂ ತಮ್ಮನ್ನು ಆಹ್ವಾನಿಸುತ್ತಿದ್ದೇವೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಯೂನಿವರ್ಸಿಟಿ ಕೊಣಾಜೆಯ ವಾಯ್ಸ್ ಆಫ್ ಸ್ಟೂಡೆಂಟ್ ಅಧ್ಯಕ್ಷರಾದ ಅಭಿಶೇಕ್ ವಾಲ್ಮಿಕಿ, ಕೆಪಿಸಿಸಿ ದ.ಕ ಪ್ರಧಾನ ಕಾರ್ಯದರ್ಶಿ ವಿಕಾಸ್ ಶೆಟ್ಟಿ, ಬಾರ್ನ್ ಅಗೇನ್ ರಿಕವರಿ ಸೆಂಟರ್ನ ಸಹ ಸ್ಥಾಪಕರಾದ ಬೀನಾ ಸಲ್ಡಾನ, ಮೇಕ್ ಎ ಚೇಂಜ್ ಫೌಂಡೇಶನ್ ನ ಫೌಂಡರ್ ಮತ್ತು ಚೇರ್ಮೇನ್ ಸುಹೈಲ್ ಕಂದಕ್, ಮಂಗಳೂರು ಎಸಿಪಿ ರವೀಶ ನಾಯ್ಕ್, ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಮೇಕ್ ಎ ಚೇಂಜ್ ಫೌಂಡೇಶನ್ ನ ಅಧ್ಯಕ್ಷರಾ ಅಬ್ದುಲ್ ಅಝೀಝ್ ತಂಝೀಲ್ ಅವರು ಉಪಸ್ಥಿತರಿದ್ದರು.