ಕಾಸರಗೋಡು : ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಬೇಕಲ್ ಬೀಚ್ ಪಾರ್ಕ್ !
Tue, Dec 09 2025 12:04:07 PM
ಕಾಸರಗೋಡು, ಡಿ. 09 (DaijiworldNews/ TA): ದಿನಂಪ್ರತಿ ಅದೇ ಓಡಾಟ ಅದೇ ಜಂಜಾಟಕ್ಕೆ ಬ್ರೇಕ್ ಹಾಕಿ ಸ್ನೇಹಿತರ ಜೊತೆಯೋ, ಕೂಡು ಕುಟುಂಬದೊಂದಿಗೋ ಒಂದೊಮ್ಮೆ ಪ್ರಕೃತಿಯ ಸುಂದರ ತಾಣಕ್ಕೆ ಭೇಟಿ ನೀಡಿ ಸಂತೋಷದಿಂದ ದಿನ ಕಳೆಯಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ಒಂದೇ ದಿನದಲ್ಲಿ ಪ್ರಕೃತಿ, ಸಮುದ್ರದ ಸೌಂದರ್ಯವನ್ನು ಆನಂದಿಸಲು ದೇವರ ಸ್ವಂತನಾಡಲ್ಲೊಂದು ಸುಂದರ ಬೇಕಲ್ ಬೀಚ್ ಪಾರ್ಕ್ ಪರಿಪೂರ್ಣ ತಾಣವಿದೆ. ಮಂಗಳೂರಿನಿಂದ 80 ಕಿ.ಮೀ ಮತ್ತು ಉಡುಪಿಯಿಂದ ಸ್ವಲ್ಪ ದೂರದಲ್ಲಿರುವ ಈ ಕರಾವಳಿ ಉದ್ಯಾನವನವು ದಕ್ಷಿಣ ಭಾರತದ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿ ತನ್ನ ರಮಣೀಯತೆಯಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಐತಿಹಾಸಿಕ ಬೇಕಲ ಕೋಟೆ ಪಕ್ಕದಲ್ಲಿರುವ ಉದ್ಯಾನವನವು ಕಣ್ತುಂಬಿಕೊಳ್ಳಲು ನೈಸರ್ಗಿಕ ಸೌಂದರ್ಯ, ಒಂದಷ್ಟು ಆಟೋಟಕ್ಕೆ ಸಾಹಸ ಚಟುವಟಿಕೆಗಳು ಮತ್ತು ವೈಶಿಷ್ಟ್ಯಮಯ ಕಾರ್ಯಕ್ರಮ ಸೌಲಭ್ಯಗಳ ಸಂಯೋಜನೆಯನ್ನು ನೀಡುತ್ತದೆ. ಇಲ್ಲಿ ಬರುವವರು ತಂಪಾದ ತಂಗಾಳಿ ಜೊತೆ ಅಲೆಗಳ ಇಂಪನ್ನು ಆನಂದಿಸುತ್ತಾ ವಿಶ್ರಾಂತಿ ಪಡೆಯಬಹುದು, ಮಕ್ಕಳೊಂದಿಗೆ ಸಾಹಸ ಸವಾರಿಗಳನ್ನು ಅನುಭವಿಸಬಹುದು ಅಥವಾ ಬೀಚ್ ತಟದಲ್ಲಿ ವಿವಾಹ, ಇತರ ಸಂಭ್ರಮಾಚರಣೆಯನ್ನೂ ಆಯೋಜಿಸಬಹುದು.
BRDC ಮತ್ತು QH ಗ್ರೂಪ್ ಸಹಯೋಗದಲ್ಲಿ ಅಭಿವೃದ್ಧಿ : ಬೇಕಲ್ ಬೀಚ್ ಪಾರ್ಕ್ ಅಭಿವೃದ್ಧಿಯು ಬೇಕಲ್ ರೆಸಾರ್ಟ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (BRDC) ಮತ್ತು ಉತ್ತರ ಕೇರಳ ಮೂಲದ QH ಗ್ರೂಪ್ ಅವರ ಸಹಯೋಗದ ಕನಸಿನ ಫಲವಾಗಿದೆ. ಈ ಯೋಜನೆಯು ಸಾಂಸ್ಕೃತಿಕ ಸಂರಕ್ಷಣೆ, ಪರಿಸರ ಸ್ನೇಹಿ ಬೆಳವಣಿಗೆ ಮತ್ತು ಸಮುದಾಯಾಭಿವೃದ್ಧಿಯನ್ನು ಒಟ್ಟಾಗಿ ಹೊಂದಿರುವ ಮಾದರಿ ಪ್ರವಾಸೋದ್ಯಮ ತಾಣವಾಗಿದೆ.
ಸಾಂಸ್ಕೃತಿಕ, ವೈವಾಹಿಕ ಮತ್ತು ಕಾರ್ಪೊರೇಟ್ ಕಾರ್ಯಕ್ರಮಗಳ ತಾಣ:
ಉದ್ಯಾನವನವು ಪ್ರತಿ ಸನ್ನಿವೇಶಕ್ಕೂ ಸೂಕ್ತ ಸ್ಥಳಗಳನ್ನು ಒದಗಿಸುತ್ತದೆ: ಬೌಗೆನ್ವಿಲ್ಲಾ: 10-40 ಜನರ ಆತ್ಮೀಯ ಕೂಟಗಳಿಗೆ ಸೀಬ್ರೀಜ್ ಕಫೆ: 50-150 ಜನರ ಕುಟುಂಬ ಸಮಾರಂಭಗಳಿಗೆ ಗಾರ್ಡನ್ ಓಪನ್ ಸ್ಟೇಜ್: 100–200 ಜನರ ಸಾಂಸ್ಕೃತಿಕ ಅಥವಾ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಆರ್ಕಿಡ್ ಮಿನಿ ಪಾರ್ಟಿ & ಬೀಚ್ ಫ್ರಂಟ್: 400+ ಅತಿಥಿಗಳಿಗೆ ಭವ್ಯ ಮದುವೆಗಳು ಮತ್ತು ಉತ್ಸವಗಳಿಗೆ
ಎಲ್ಲಾ ಸ್ಥಳಗಳಲ್ಲಿ ಅಲಂಕಾರ, ಧ್ವನಿ-ಬೆಳಕು ವ್ಯವಸ್ಥೆಗಳು, ಆಹಾರ ಕೌಂಟರ್ಗಳು ಮತ್ತು ಛಾಯಾಗ್ರಹಣ ಸೌಲಭ್ಯಗಳೊಂದಿಗೆ ವೈಯಕ್ತಿಕ ಪ್ಲ್ಯಾನಿಂಗ್ ಸಹಾಯವಿದೆ.
ಸಾಹಸ ಮತ್ತು ರೋಮಾಂಚನ - ಗ್ರಾವಿಟಿ ಝೋನ್ ಮತ್ತು ಸ್ಕೈ ಡೈನಿಂಗ್: ಬೇಕಲ್ ಬೀಚ್ ಪಾರ್ಕ್ನ ಗ್ರಾವಿಟಿ ಅಡ್ವೆಂಚರ್ ಝೋನ್ ರೋಮಾಂಚನಾ ಕ್ಷಣಕ್ಕೆ ಸಾಕ್ಷಿಯಾಗುವುದಷ್ಟೇ ಅಲ್ಲದೆ ದೇಹಕ್ಕೆ ಅಭ್ಯಾಸಗಳನ್ನು ನೀಡುತ್ತದೆ. ಫ್ರೀ ಫಾಲ್, ಜಿಪ್ ಲೈನ್, ವಾಲ್ ಕ್ಲೈಂಬಿಂಗ್ ಟವರ್, ಜೈಂಟ್ ಸ್ವಿಂಗ್, ಸ್ಕೈ ಸೈಕ್ಲಿಂಗ್ ಮತ್ತು ಸ್ಕೈ ಡೈವಿಂಗ್ ಸೇರಿದಂತೆ ವಿವಿಧ ಸಾಹಸ ಚಟುವಟಿಕೆಗಳು ಲಭ್ಯವಿವೆ.
ಕುಟುಂಬ ಮತ್ತು ಮಕ್ಕಳಿಗಾಗಿ ಮನರಂಜನೆ: ಪೆಟ್ ಫಾರೆಸ್ಟ್: ಮಕ್ಕಳು ಮತ್ತು ಕುಟುಂಬಗಳು ಪ್ರಾಣಿಗಳೊಂದಿಗೆ ನೇರ ಸಂಪರ್ಕ ಸಾಧಿಸುತ್ತಾರೆ ಆರ್ಕೇಡ್ ಗೇಮ್ ಸ್ಟೇಷನ್: ಬಂಪರ್ ಕಾರು, ಬಿಲ್ಲುಗೇಮ್, ವೀಡಿಯೋ ಗೇಮ್ಗಳು ಮಿನಿ ರೈಲು, ಟ್ರಾಂಪೊಲೈನ್, ಪಾಪ್-ಅಪ್ ಆಕರ್ಷಣೆಗಳು: ವರ್ಷಪೂರ್ತಿ ಹಬ್ಬದ ವಾತಾವರಣ
ಶೈಕ್ಷಣಿಕ ಪ್ರವಾಸ ಮತ್ತು ಶಾಲಾ ಪ್ಯಾಕೇಜ್ : ಶಾಲಾ ವಿಹಾರಕ್ಕೆ 299 ರೂ. ಪ್ರತಿ ವಿದ್ಯಾರ್ಥಿಗೆ ಪ್ಯಾಕೇಜ್ ಲಭ್ಯವಿದ್ದು, ಬೇಕಲ ಕೋಟೆ ಪ್ರವೇಶ, ಪೆಟ್ ಫಾರೆಸ್ಟ್, ಸವಾರಿಗಳು, ಆಹಾರ ಮತ್ತು ಐಸ್ ಕ್ರೀಮ್ ಸೇರಿವೆ. ಶಿಕ್ಷಕರಿಗೆ ಉಚಿತ ಪ್ರವೇಶ ಮತ್ತು ಉಪಹಾರಗಳೊಂದಿಗೆ ವಿದ್ಯಾರ್ಥಿಗಳ ಸುರಕ್ಷಿತ ಮೇಲ್ವಿಚಾರಣೆ ಖಚಿತ.
ವಾರ್ಷಿಕ ಉತ್ಸವಗಳು ಮತ್ತು ಸಮುದಾಯ ಕಾರ್ಯಕ್ರಮಗಳು: ಬೇಕಲ್ ಬೀಚ್ ಫೆಸ್ಟ್: ಸಂಗೀತ ಮತ್ತು ಕಲಾ ವಾರ ಬೇಕಲ್ ಬೀಚ್ ಕಾರ್ನಿವಲ್: ಹತ್ತು ದಿನಗಳ ಮನರಂಜನೆ ಕಲ್ಲುಮ್ಮಕ್ಕ ಆಹಾರ ಬಿಯೆನ್ನೆಲ್: ಸಮುದ್ರಾಹಾರ ಪ್ರಿಯರಿಗೆ
ಪ್ರವೇಶ ಮತ್ತು ಸಂಪರ್ಕ : ಕಾಞಂಗಾಡ್ನಿಂದ : 15 ಕಿ.ಮೀ ಮಂಗಳೂರಿನಿಂದ: 80 ಕಿ.ಮೀ ಸಂಪರ್ಕ: ರಸ್ತೆ ಮತ್ತು ರೈಲು
ವಿಚಾರಣೆ ಮತ್ತು ಬುಕಿಂಗ್ಗಾಗಿ: ಬೇಕಲ್ ಬೀಚ್ ಪಾರ್ಕ್, ಕಾಸರಗೋಡು, ಕೇರಳ ಇಮೇಲ್: ad.bekalbeachpark@gmail.com ವೆಬ್ಸೈಟ್: www.bekalbeachpark.in Instagram: https://www.instagram.com/bekalbeachpark/?hl=en
ನೈಸರ್ಗಿಕ ಸೌಂದರ್ಯ, ಸಾಹಸ, ಮನರಂಜನೆ ಮತ್ತು ಶೈಕ್ಷಣಿಕ ಅನುಭವಗಳನ್ನು ಒಟ್ಟಿಗೆ ಅನುಭವಿಸಲು ಬೇಕಲ್ ಬೀಚ್ ಪಾರ್ಕ್ ಎಲ್ಲ ವಯಸ್ಸಿನ ಪ್ರವಾಸಿಗರಿಗಾಗಿ ಪರಿಪೂರ್ಣ ತಾಣವಾಗಿದೆ.