ಮಂಗಳೂರು, ಡಿ. 08 (DaijiworldNews/TA) : ಮಧ್ಯಪ್ರಾಚ್ಯದ ಸುಗಂಧ ದ್ರವ್ಯ ಈಗ ಮಂಗಳೂರಿಗೆ ಕಾಲಿಟ್ಟಿದೆ. ಲಿಯೊರ್ ಪರ್ಫ್ಯೂಮ್ ನ ಭಾರತದ ಮೊದಲ ಶಾಖೆ ಮಂಗಳೂರಿನ ಬಲ್ಮಟ್ಟ ರಸ್ತೆಯಲ್ಲಿರುವ ಎಸ್ ಇ ಎಸ್ ಆಸ್ಪತ್ರೆಯ ಬಳಿಯ ಸರಸ್ವತಿ ಕಾಂಪ್ಲೆಕ್ಸ್ ನಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿತು.



ಶಾಖೆಯ ಉದ್ಘಾಟನೆಯನ್ನು ಮಿಥುನ್ ರೈ ನೆರವೇರಿಸಿದರು. ದುಬೈಯಲ್ಲಿ ತನ್ನ ಪಯಣ ಆರಂಭಿಸಿದ ಲಿಯೊರ್ ಪರ್ಫ್ಯೂಮ್, ಉನ್ನತ ಮಟ್ಟದ ಮಧ್ಯಪ್ರಾಚ್ಯ ಶೈಲಿಯ ಸುಗಂಧಗಳನ್ನು ತಯಾರಿಸುವಲ್ಲಿ ಪ್ರಸಿದ್ಧವಾಗಿದೆ. ಇದೀಗ ಮಂಗಳೂರಿನಲ್ಲಿ ಆರಂಭವಾದ ಈ ಹೊಸ ಮಳಿಗೆಯಲ್ಲಿ ಮಧ್ಯಪ್ರಾಚ್ಯದ ಪರ್ಫ್ಯೂಮ್ ಗಳನ್ನು ಗ್ರಾಹಕರಿಗೆ ಒದಗಿಸುವುದೇ ಇದರ ಉದ್ದೇಶವಾಗಿದೆ.
ಮಳಿಗೆಯಲ್ಲಿ ಹಸಿರು, ಹೂವಿನ, ಹಣ್ಣುಗಳ ಪರ್ಫ್ಯೂಮ್ ಗಳಿಂದ ಹಿಡಿದು ಓರಿಯೆಂಟಲ್ ಸುವಾಸನೆಗಳವರೆಗೆ ವೈವಿಧ್ಯಮಯ ಪರಿಮಳದ ಪರ್ಫ್ಯೂಮ್ ಲಭ್ಯವಿದೆ. ಉದ್ಘಾಟನೆಯಲ್ಲಿ ಪಾಲ್ಗೊಂಡವರು ಮಂಗಳೂರಿನಲ್ಲಿ ಇಂತಹ ವಿಶಿಷ್ಟ ಪರಿಮಳದ ಪರ್ಫ್ಯೂಮ್ ಗಳು ಲಭ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ಜನ್ಮ ಸ್ಥಳವಾದ ಮಂಗಳೂರನ್ನೇ ಮೊದಲ ಭಾರತೀಯ ಶಾಖೆಗಾಗಿ ಆಯ್ಕೆ ಮಾಡಿರುವುದು ಸಂತೋಷ ತಂದ ತೀರ್ಮಾನವೆಂದು ಲಿಯೊರ್ ತಂಡ ತಿಳಿಸಿದೆ.
ಶೀಘ್ರದಲ್ಲೇ ದೇಶದ ಅನೇಕ ನಗರಗಳಿಗೆ ವಿಸ್ತರಿಸುವ ಲಕ್ಷ್ಯವಿರುವುದಾಗಿ ಅವರು ತಿಳಿಸಿದ್ದಾರೆ. ಲಿಯೊರ್ ಪರ್ಫ್ಯೂಮ್ ತಮ್ಮ ಅಧಿಕೃತ ವೆಬ್ಸೈಟ್ ಮೂಲಕ ದೇಶವ್ಯಾಪಿ ಹೋಂ ಡೆಲಿವರಿ ಸಹ ಒದಗಿಸುತ್ತಿದ್ದು, ಅವರ ವಿಶೇಷ ಪರ್ಫ್ಯೂಮ್ ಗಳು ಭಾರತದಾದ್ಯಂತ ಗ್ರಾಹಕರಿಗೆ ಲಭ್ಯವಾಗುತ್ತವೆ. ಇನ್ನು ಕಾರ್ಯಕ್ರಮದಲ್ಲಿ ಸತೀಶ್ ಕುಂಪಲ, ಡಾ. ಯು. ಟಿ ಇಫ್ತಿಕಾರ್ ಫರೀದ್, ಲಿಯೋರ್ ಕುಟುಂಬದ ಸದಸ್ಯರು, ಸ್ನೇಹಿತರು, ಮತ್ತು ಲಿಯೊರ್ ತಂಡದವರು ಭಾಗವಹಿಸಿದ್ದರು.