ಬಂಟ್ವಾಳ, ಡಿ. 07 (DaijiworldNews/TA): ಪ್ರಗತಿಪರ ಕೃಷಿಕ ದಿವಂಗತ ಬಿ. ಸದಾನಂದ ಪೂಂಜ ಇವರ ಪುತ್ರ ಗ್ರಾ. ಪಂ. ಮಾಜಿ ಅಧ್ಯಕ್ಷ ಶೋಭಿತ್ ಪೂಂಜ ನೇತೃತ್ವದಲ್ಲಿ, ಮತ್ತು ಸಜೀಪ ದಸರಾ 2026 ಶತಮಾನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಪಾಳು ಬಿದ್ದ 10 ಎಕರೆ ಗದ್ದೆಯಲ್ಲಿ ನೇಜಿ ನಾಟಿ ನಡೆಸುವ ಕಾರ್ಯಕ್ರಮ ಇಂದು ಸಜೀಪ ಮೂಡ ಗ್ರಾಮದ ಕಾಂತಾಡಿಯಲ್ಲಿ ನಡೆಯಿತು.




ಬೆಲೆ ಏರಿಕೆ ನಡುವೆಯೂ ವಿವಿಧ ರೋಗ ಭಾದೆ ಯಿಂದ ಕಳೆಗುಂದುತ್ತಿರುವ ಅಡಿಕೆ ಬೆಳೆಗೆ ಪರ್ಯಾಯವಾಗಿ ಮರೆಯಾಗುತ್ತಿರುವ ಭತ್ತ ಬೇಸಾಯದತ್ತ ಇವರು ಚಿತ್ತ ಹರಿಸಿದ್ದು, ನೇಜಿ ನಾಟಿ' ಪ್ರಾತ್ಯಕ್ಷಿಕೆ* ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ದಲ್ಲಿ ಸ್ಥಳೀಯ ಹಿ. ಪ್ರಾ ಶಾಲೆ ವಿದ್ಯಾರ್ಥಿಗಳು ಕೂಡಾ ಭಾಗವಹಿಸಿದ್ದು.ಸಜೀಪ ಮಾಗಣೆಯ ತಂತ್ರಿಗಳಾದ ಎಂ ಸುಬ್ರಹ್ಮಣ್ಯ ಭಟ್ ಹಾಗೂ ಸುಭಾಷ್ ಯುವಕ ಮಂಡಲ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ಶೆಟ್ಟಿ ಸಂಕೇಶ ಹಾಗೂ ಪ್ರಗತಿಪರ ಕೃಷಿಕ ಅವಿಲ್ ಮಿನೇಜಸ್ ಮತ್ತು ಶ್ರೀದೇವಿ ಪ್ರಸಾದ್ ಪೂಂಜ ಚಾಲನೆ ನೀಡಿದರು.
ಸಜೀಪಮೂಡ ಶಾಲೆಯ ಮಕ್ಕಳೂ ಕೂಡ ಈ ಸಂದರ ಕಾರ್ಯಕ್ರಮದಲ್ಲಿ ಗದ್ದೆಗಿಳಿದು ನೇಜಿ ನಾಟಿ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಶ್ರೀ ದೇವಿಪ್ರಸಾದ್ ಪೂಂಜಾ ,ಯೋಗಿಶ್ ಬೆಳ್ಚಾಡ ಕಿಶೋರ್ ಅಗರಿ ,ಗಿರೀಶ್ ಕುಮಾರ್ ಪೆರ್ವ,ನವೀನ್ ಆಳ್ವಾ ,ಸಿದ್ಧಿಕ್ ಕೊಳಕೆ ,ಶಾಲ ಸಹ ಶಿಕ್ಷಕಿ ಜೆಸಿಂತಾ,ವಿಶ್ವಾನಾಥ್ ಕೊಟ್ಟಾರಿ,ಶ್ರೀನಾಥ್ ಶೆಟ್ಟಿ,ಪಂಚಾಯತ್ ಪಿ.ಡಿ.ಓ ಶ್ರೀಮತಿ ಮಾಯಕುಮಾರಿ ರೋಟರಿ ಕ್ಲಬ್ ಅಧ್ಯಕ್ಷ -ವಿಜಯ್ ಫೆರ್ನಾಂಡಿಸ್ ,ಸ್ಥಾಪಕ ಸದಸ್ಯರು- ಸೆಬೆಸ್ಟಿಯನ್ ಮೆನೇಜಸ್, ಪೂರ್ವ ಅಧ್ಯಕ್ಷರು ಆಂಟೊನಿ ಸಿಕ್ವೇರಾ ಹಾಗೂ ಯುವಕ ಮಂಡಲದ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.