ಉಡುಪಿ, ಡಿ. 07 (DaijiworldNews/TA): ಕುಕ್ಕೆಹಳ್ಳಿಯ ಪಿ ಎಂ ಶ್ರೀ ಶಾಲೆಯಲ್ಲಿ ಮಕ್ಕಳು ಊಟ ಮಾಡುವ ಧಾನ್ಯ ಹಾಳಾಗಿದ್ದರೂ ಅದೇ ಧಾನ್ಯವನ್ನೆ ಮಕ್ಕಳಿಗೆ ನೀಡಿದ ಆರೋಪ ಕೇಳಿ ಬಂದಿದೆ. ಪೋಷಕರಿಗೆ ಮಕ್ಕಳು ಈ ವಿಚಾರ ತಿಳಿಸಿದ್ದು ಪೋಷಕರು, ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆ ಶಾಲೆಯವರು,ಎಸ್ ಡಿ ಎಂ ಸಿ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು ಎಚ್ಚತ್ತುಕೊಳ್ಳದ ಶಾಲೆಯ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದರೆ. ಶಾಲೆಯಲ್ಲಿ 285ರಿಂದ 300 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹಲವಾರು ದಿನಗಳಿಂದ ಈ ಘಟನೆ ನಡೆಯುತ್ತಿದ್ದು ಇಂದು ಬೆಳಕಿಗೆ ಬಂದಿದೆ.
ಈ ಹಿಂದೆ ಇಂತಹ ಘಟನೆ ನಡೆದಿದ್ದು ಅಧಿಕಾರಿಗಳ ಗಮನಕ್ಕೆ ತಂದರು ಲೆಕ್ಕವಿಲ್ಲದಂತಾಗಿದೆ. ಅದೆಷ್ಟು ಬಾರಿ ಶಾಲೆಯ ಗಮನಕ್ಕೆ ತಂದಿದ್ದರೂ ಸಹ ಮಕ್ಕಳಿಗೆ ವಿಚಾರ ಮುಂದುವರೆದ ಕಾರಣ ಮಕ್ಕಳು ಮನೆಯ ಪೋಷಕರಿಗೆ ತಿಳಿಸಿದ್ದಾರೆ. ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.