ಉಡುಪಿ, ಡಿ. 07 (DaijiworldNews/TA): ಅಧಿವೇಶನದಲ್ಲಿ ಗೋ ಸಂರಕ್ಷಣಾ ಕಾಯ್ದೆ 2020 ತಿದ್ದುಪಡಿಗೆ ಮುಂದಾದ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಿಡಿಕಾರಿದೆ.

ವಿಶ್ವ ಹಿಂದೂ ಪರಿಷತ್ ಗೋರಕ್ಷಾ ವಿಭಾಗ ಕರ್ನಾಟಕ ದಕ್ಷಿಣ ಮುಖ್ಯಸ್ಥ ಸುನಿಲ್ ಕೆ ಆರ್ ಗೋ ಕಳ್ಳರಿಗೆ ಸಹಕರಿಸುವ ನೀತಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋಮವಾರ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿ ಗೋ ಸಂರಕ್ಷಣಾ ಕಾಯ್ದೆ ಸಡಿಲಗೊಳಿಸಿ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದರು.