ಪುತ್ತೂರು, ಡಿ. 06 (DaijiworldNews/TA): ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್(ರಿ.) ವತಿಯಿಂದ ಮೆಡ್ ಲ್ಯಾಂಡ್ ಆಸ್ಪತ್ರೆ ಸಂಪ್ಯ ಸಹಯೋಗದಲ್ಲಿ ಡಿ.14ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಪುತ್ತೂರಿನ ಕಬಕ ಮಸೀದಿ ಹಾಲ್ ನಲ್ಲಿ ಬೆಳಗ್ಗೆ 9.30 ರಿಂದ 1.30ರವರೆಗೆ ಈ ಶಿಬಿರ ನಡೆಯಲಿದೆ. ತಜ್ಞ ವೈದ್ಯರಿಂದ ಉಚಿತ ಸಲಹೆ, ಸಾಮಾನ್ಯ ದೇಹ ತಪಾಸಣೆ, ಲ್ಯಾಬ್ ಟೆಸ್ಟ್, ದಂತ ತಪಾಸಣೆ ನಡೆಯಲಿದ್ದು, ನುರಿತ ಹೃದಯ ತಜ್ಞರು, ಮೂಳೆ ತಜ್ಞರು ತಪಾಸಣೆ ನಡೆಸಲಿದ್ದಾರೆ.
ಶಿಬಿರದಲ್ಲಿ ಸವಲತ್ತು ಕಾರ್ಡುಗಳನ್ನು ವಿತರಿಸಲಾಗುತ್ತಿದ್ದು, ಸರಿಯಾದ ಚಿಕಿತ್ಸೆ ಮಾಡಿಸಿ, ರೋಗ ಮುಕ್ತರಾಗಿ ಜೀವಿಸಿ ಎಂಬ ಧ್ಯೇಯದೊಂದಿಗೆ ಟೀಮ್ ಇಇಎಫ್ ಕಾರ್ಯನಿರ್ವಹಿಸುತ್ತಿದೆ.