ಸುಳ್ಯ, ಡಿ. 06 (DaijiworldNews/TA): ಇಂಟರ್ ಲಾಕ್ ತುಂಬಿದ ಲಾರಿಯೊಂದು ಹಿಂಬದಿಗೆ ಚಲಿಸುತ್ತಿದ್ದ ಸಂದರ್ಭ ಲಾರಿಯ ಚಕ್ರ ಚರಂಡಿಗೆ ಸಿಲುಕಿ ಕೆಲಕಾಲ ಟ್ರಾಫಿಕ್ ಜಾಂ ಸಮಸ್ಯೆ ಉಂಟಾದ ಘಟನೆ ಸುಳ್ಯದ ಗಾಂಧಿನಗರ ಬಳಿ ನಡೆಯಿತು.


ಸ್ಥಳೀಯ ಕಟ್ಟಡದ ಆವರಣಕ್ಕೆ ಇಂಟರ್ಲಾಕ್ ಅಳವಡಿಸಲು ಲಾರಿಯಲ್ಲಿ ಇಂಟರ್ ಲಾಕ್ ಬಂದಿದ್ದು ಲಾರಿ ರಿವರ್ಸ್ ಬರುತ್ತಿದ್ದಾಗ ಹಿಂದಿನ ಚಕ್ರ ಪಕ್ಕದ ಚರಂಡಿಯ ಸ್ಲಾಬ್ ಮುರಿದು ಚರಂಡಿಗೆ ಇಳಿದಿದೆ. ಈ ಸಂದರ್ಭದಲ್ಲಿ ಲಾರಿ ಹಿಂದೆ ಅಥವಾ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ.
ಬಳಿಕ ಸಂಬಂಧಪಟ್ಟವರು ಲಾರಿಯಿಂದ ಇಂಟರ್ಲಾಕ್ ಖಾಲಿ ಮಾಡಲು ಸುಮಾರು 2 ಗಂಟೆ ಕಾಲ ಪ್ರಯತ್ನಿಸಬೇಕಾಯಿತು. ಈ ಹಂತದಲ್ಲಿ ಹೆದ್ದಾರಿಯಲ್ಲಿ ಇತರ ವಾಹನ ಸವಾರಕ್ಕೆ ತೊಡಕು ಉಂಟಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.