ಉಡುಪಿ, ಡಿ. 06 (DaijiworldNews/TA): ಕಾರಿಡಾರ್, ಮಥುರಾ ಕೃಷ್ಣ ಜನ್ಮಭೂಮಿ ಪುನಹ ನವೀಕರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ನೀಡಿದ್ದೇವೆ. ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಜಿ ಹೇಳಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿ, ಉಡುಪಿಯಲ್ಲಿ ಕಾರಿಡಾರ್ ನಿರ್ಮಾಣದ ಬಗ್ಗೆ, ಮಥುರಾ ಕೃಷ್ಣ ಜನ್ಮಭೂಮಿ,,ಸಮಾಜ ನಾಗರಿಕ ನೀತಿ ಸಂಹಿತೆ, ಗೋ ಹತ್ಯಾ ನಿಷೇಧ ಇವೆಲ್ಲ ನೀತಿಯನ್ನು ಸಮಾಜಕ್ಕೆ ತರಬೇಕೆಂದು ಪ್ರಧಾನಿಯವರಲ್ಲಿ ನಮ್ಮ ಬೇಡಿಕೆಯನ್ನಿಟ್ಟಿದ್ದೇವೆ. ಮಾತ್ರವಲ್ಲದೆ ಯೋಗ ದಿನಾಚರಣೆ ಇನ್ನಿತರ ದಿನಾಚರಣೆಯಂತೆ ಭಗ್ವದ್ಗೀತೆಯ ಪ್ರಚಾರಕ್ಕಾಗಿ ಇಂಟರ್ ನ್ಯಾಷನಲ್ ಗೀತಾ ಡೇ ಎಂದು ಒಂದು ದಿನವನ್ನು ಆಚರಿಸುವಂತೆ ನಿಯಮಗಳನ್ನು ತರುವಂತೆ ಮನವಿಯನ್ನು ಮಾಡಿಕೊಂಡಿದ್ದೇವೆ. ದಿನಾಚರಣೆಯ ದಿನವನ್ನು ಅವರು ನಿರ್ಧರಿಸಬೇಕು. ಪ್ರಧಾನಿಯವರ ಉತ್ತರಕ್ಕೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.