ಮಂಗಳೂರು, ಡಿ. 06 (DaijiworldNews/AK): ಗಾಯಕ ಹಾಗೂ ಕೊಂಕಣಿ ಹಾಡು ಬರಹಗಾರ ಶ್ರೀ ಜೆರಿ ಬೊಂದೆಲ್ ಇವರ 12ನೇ "ಜೆರಿ ನೈಟ್" ಸಂಗೀತ ಕಾರ್ಯಕ್ರಮದ ಪ್ರಥಮ ಪೋಸ್ಟರ್ ಲೋಕಾರ್ಪಣೆ ಕಾರ್ಯಕ್ರಮವು ಡಿ. 05 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಪ್ರಸಿದ್ದ ಎಂ.ಸಿ.ಸಿ ಬ್ಯಾಂಕ್ ಹಂಪನ್ ಕಟ್ಟಾ, ಇದರ ಸಭಾಂಗಣದಲ್ಲಿ ಜರುಗಿತು.









ಡೋನ್ ಬೋಸ್ಕೊ ಸಭಾಂಗಣ ಮಂಗಳೂರು ಇದರ ಅಧ್ಯಕ್ಷರಾದ ವಂದನೀಯ ಫಾದರ್ ರೋಕ್ಕಿ ಡಿಕುನ್ಹಾ ರವರು ಆಶೀರ್ವಚನ ಮಾಡಿ ಕಾರ್ಯಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಜೆರಿ ನೈಟ್ ಸಂಗೀತ ಕಾರ್ಯಕ್ರಮದ ರುವಾರಿ ಶ್ರೀ ಜೆರಿ ಬೊಂದೆಲ್, ಎಂ.ಸಿ.ಸಿ ಬ್ಯಾಂಕ್ ನ ಚೇರ್ಮನ್ ಸಹಕಾರ ರತ್ನ ಬಿರುದಾಂಕಿತ ಶ್ರೀ ಅನಿಲ್ ಲೋಬೋ, ಫೆರ್ಮಾಯಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಅಲ್ವಾರಿಸ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಆಡಳಿತ ಮಂಡಳಿ ಸದಸ್ಯ ಆಲ್ವಿನ್ ಪಿಂಟೊ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾಯ್ಜಿ ವರ್ಲ್ಡ್ ಸುದ್ದಿ ವಾಹಿನಿಯ ಆಡಳಿತದಾರರಾದ ಸ್ಟ್ಯಾನಿ ಡಿಸೋಜ ಬೇಳಾ, ಪ್ರವೀಣ್ ತಾವ್ರೊ, ನಿವೃತ್ತ ಪೋಲೀಸ್ ಅಧಿಕಾರಿ ಶ್ರೀಮತಿ ಲೆನೆಟ್ ಕ್ಯಾಸ್ತಲೀನೊ, ಸ್ವಾಗತ್ ಅಟೋಮೊಬೈಲ್ಸ್ ಮತ್ತು ಗ್ಯಾರೇಜ್, ನಂತೂರು ಇದರ ಮಾಲಕ ಶ್ರೀ ಲೆಸ್ಲಿ ಡಿ ಕ್ರೂಜ್, ಗಾಯಕ ಶ್ರೀ ಲಿಯೊ ರಾಣಿಪುರ, ಸಮಾಜ ಸೇವಕ ಶ್ರೀ ಬೋಲ್ಪಿನ್ ಡಿಸೋಜ, ಕುಮಾರಿ ಸ್ವೀಡಲ್ ಇವರುಗಳು ಹಾಜರಿದ್ದು ಎಂ. ಸಿ. ಸಿ ಬ್ಯಾಂಕ್ ಚೇರ್ಮನ್ ಶ್ರೀ ಅನಿಲ್ ಫೆರ್ಮಾಯಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಅಲ್ವಾರಿಸ್ ಇವರು ಜೆರಿ ನೈಟ್ ಕಾರ್ಯಕ್ರಮದ ಪೋಸ್ಟರ್ ಲೋಕಾರ್ಪಣೆ ಮಾಡಿದರು.
ರೋಷನ್ ಕ್ರಾಸ್ತಾ, ಪಾಲ್ದನೆ ಇವರು ಈ ಕಾರ್ಯಕ್ರಮದ ಕಾರ್ಯನಿರ್ವಹಣೆಯನ್ನು ಮಾಡಿದರು. ನೆರೆದಿರುವ ಸರ್ವರಿಗೂ ತಂಪು ಪಾನೀಯ ಹಾಗೂ ಫಲಾಹಾರವನ್ನು ವಿತರಿಸಲಾಯಿತು.