ಬಂಟ್ವಾಳ,ಡಿ. 01 (DaijiworldNews/TA): ಹೆದ್ದಾರಿಯ ಬದಿಯ ಡಿವೈಡರ್ ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಸಮೀಪ ಸೋಮವಾರ ಮುಂಜಾನೆ ಸುಮಾರು 2 ಗಂಟೆಗೆ ನಡೆದಿದೆ.

ಕಳಸ ನಿವಾಸಿ ಸಂದೇಶ್ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಾರನನ್ನು 3.50 ಗಂಟೆಗೆ ಮಂಗಳೂರಿಗೆ ಮೀನು ಮಾರ್ಕೆಟಿಗೆ ತೆರಳುತ್ತಿದ್ದ ಗಡಿಯಾರ ನಿವಾಸಿಗಳಾದ ಹಮೀದ್ ಮತ್ತು ಝಿಯಾನ್ ಅವರು ಕೂಡಲೆ ಮಾಣಿಯ ಸೋಷಿಯಲ್ ಇಕ್ವಾ ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಯುವಕರ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.