ಕುಂದಾಪುರ, ಡಿ. 01 (DaijiworldNews/TA): ಕೋಣಿ ಗ್ರಾಮದ ಎಚ್ಎಂಟಿ ಕ್ರಾಸ್ ಬಳಿ ರಿಕ್ಷಾ ಢಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮತ್ತು ಮಹಿಳೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.

ರಿಕ್ಷಾ ಚಾಲಕ ಜೀವನ್ ಸೂಚನೆ ನೀಡದೆ ರಿಕ್ಷಾವನ್ನು ತಿರುಗಿಸಿದ ಕಾರಣ ಬಸ್ರೂರು ಪೇಟೆ ಕಡೆಯಿಂದ ಮೂರುಕೈ ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿಯಾಗಿದೆ. ಸವಾರ ಜೈಸನ್ ಡಿ’ಸೋಜಾ ಮತ್ತು ಸಹಸವಾರ ಆರ್ಚಿ ಡಿ’ಸೋಜಾ ಹಾಗೂ ರಿಕ್ಷಾದಲ್ಲಿದ್ದ ಕೋಣಿ ಗ್ರಾಮದ ಶಾರದಾ (47) ಅವರಿಗೆ ಗಾಯವಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.