ಸುಬ್ರಮಣ್ಯ, ನ. 29 (DaijiworldNews/AA): ಅಪ್ರಾಪ್ತ ಬಾಲಕನಿಗೆ ಗದರಿಸಿ ಕೋಲಿನಿಂದ ಹೊಡೆದ ಆರೋಪದ ಮೇಲೆ ವ್ಯಕ್ತಿಯೋರ್ವರ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಮಹಿಳೆಯ ಅಪ್ರಾಪ್ತ ಪ್ರಾಯದ ಮಗನು, ಸ್ಥಳೀಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾನೆ. ನ. 24ರಂದು ಆರೋಪಿ ಚೇತನ್ ಎಂಬವರು ಬಾಲಕನಿಗೆ ಗದರಿಸಿ ಕೋಲಿನಿಂದ ಹೊಡೆಯುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಪ್ರಸಾರವಾಗಿರುವುದು ದೂರುದಾರ ಮಹಿಳೆಯ ಗಮನಕ್ಕೆ ಬಂದಿದೆ.
ಈ ಹಿನ್ನೆಲೆ ಬಾಲಕನ ತಾಯಿ ಆರೋಪಿ ಚೇತನ್ ಅವರ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ:60/2025, ಕಲಂ:118(1)BNS-2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.