ಬಂಟ್ವಾಳ, ನ. 25 (DaijiworldNews/TA): ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ಕಾರ್ಯದಲ್ಲಿ ಕರ್ತವ್ಯ ನಿರ್ವಹಿದ ಕೆಲವು ಶಿಕ್ಷಕರಿಗೆ ಗಣತಿ ಕಾರ್ಯದ ಸಮಯದಲ್ಲಿ ಹೆಜ್ಜೆನು ದಾಳಿ, ಶ್ವಾನ ದಾಳಿ ಹಾಗೂ ರಸ್ತೆಯ ಅಪಘಾತಗಳಿಂದ ಅನಾರೋಗ್ಯಕ್ಕೆ ತುತ್ತಾದಂಥ ಶಿಕ್ಷಕರನ್ನು ದ.ಕ ಜಿಲ್ಲಾಧಿಕಾರಿ ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.




ಕಷ್ಟದ ಸಮಯದಲ್ಲೂ ಗಣತಿ ಕಾರ್ಯ ಪೂರ್ಣಗೊಳಿಸಿದ ಸರ್ಕಾರಿ ಪ್ರೌಢ ಶಾಲೆ ಸಜೀಪ ಮೂಡ, ಗ್ರಾಮದ ಶಾಲಾ ಶಿಕ್ಷಕ ವೆಂಕಟರಮಣ ಆಚಾರ್ ಹಾಗೂ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಎಂಬಲ್ಲಿನ ಶಾಲಾ ಶಿಕ್ಷಕಿ ಸುರೇಖಾ ಅವರಿಗೂ ಜಿಲ್ಲಾಡಳಿತದ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಕಾವಳ ಮೂಡೂರು ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳ ಕೊಠಡಿಗೆ ತೆರಳಿ ಅವರಿಗೆ ದಿನನಿತ್ಯ ನೀಡುತ್ತಿರುವ ಉಟೋಪಚಾರ ಪೌಷ್ಟಿಕತೆಯಿಂದ ಕೂಡಿದೆಯೇ ಎಂದು ವಿಚಾರಿಸಿದರು.
ಜೊತೆಗೆ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಕುಶಲೋಪರಿ ನಡೆಸಿದರು. ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ, ಶಿಕ್ಷಣ ಸಂಯೋಜಕರಾದ ಪ್ರತಿಮಾ ವೈ ವಿ ಹಾಗೂ ಕಂದಾಯ ನಿರೀಕ್ಷಕರಾದ ಜೆ ಜನಾರ್ಧನ್, ವಿಜಯ್ ಆರ್,ರವಿ ಎನ್ ಉಪಸ್ಥಿತರಿದ್ದರು.