ಬಂಟ್ವಾಳ, ನ. 25 (DaijiworldNews/TA): ಸಾರ್ವಜನಿಕ ಕಿರಿಕಿರಿಯಾಗುವಂತೆ, ಕರ್ಕಶವಾಗಿ ಧ್ವನಿವರ್ಧಕ ಬಳಕೆಯ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 22ರಂದು ರಾತ್ರಿ ಬಂಟ್ವಾಳ ಭಂಡಾರಿಬೆಟ್ಟು ಎಂಬಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಹಾಗೂ ಕರ್ಕಶವಾಗಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ತೊಂದರೆಯಾಗುವಂತೆ ಧ್ವನಿವರ್ಧಕ ಬಳಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು.
ಈ ನಿಮಿತ್ತ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮದುವೆ ಕಾರ್ಯಕ್ರಮದ ಹಿನ್ನೆಲೆ ಯಾವುದೇ ಪೂರ್ವಾನುಮತಿ ಪಡೆಯದೇ, ಕರ್ಕಶವಾಗಿ ಡಿ.ಜೆ ಧ್ವನಿವರ್ಧಕ ಬಳಸುತ್ತಿದ್ದುದು ಕಂಡುಬಂದಿದೆ. ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.