ಉಡುಪಿ,ನ. 24 (DaijiworldNews/AK): ಮಡಗಾಂವ್ ರೈಲು ನಿಲ್ದಾಣದಲ್ಲಿ ಭಾನುವಾರ, ನವೆಂಬರ್ 23 ರಂದು ನಡೆಯಲಿದ್ದ ಸಂಭಾವ್ಯ ದುರಂತವೊಂದು ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಪ್ರಯಾಣಿಕನೊಬ್ಬ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರಕ್ಕೆ ಜಾರಿ ಬಿದ್ದ ಘಟನೆ ನಡೆದಿದೆ.


https://daijiworld.ap-south-1.linodeobjects.com/Linode/images3/Averted_24112025_3.jpg>
ರೈಲು ಸಂಖ್ಯೆ 20112 ಕೊಂಕಣ ಕನ್ಯಾ ಎಕ್ಸ್ಪ್ರೆಸ್ ಪ್ಲಾಟ್ಫಾರ್ಮ್ ಸಂಖ್ಯೆ 1 ರಿಂದ ಹೊರಡುತ್ತಿದ್ದಾಗ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ಲಾಟ್ಫಾರ್ಮ್ನಲ್ಲಿ ಕರ್ತವ್ಯದಲ್ಲಿದ್ದ ಆರ್ಪಿಎಫ್ ಕಾನ್ಸ್ಟೆಬಲ್ ಕಪಿಲ್ ಸೈನಿ ಮತ್ತು ಹೆಡ್ ಕಾನ್ಸ್ಟೆಬಲ್ ಆರ್ಎಸ್ ಭಾಯ್ ತಕ್ಷಣ ಎಚ್ಚೆತ್ತು ಪ್ರಯಾಣಿಕನನ್ನು ಸುರಕ್ಷಿತವಾಗಿ ಎಳೆದು ಗಂಭೀರ ಅಪಘಾತವನ್ನು ತಪ್ಪಿಸಿದ್ದಾರೆ
ಅವರ ತ್ವರಿತ ಮತ್ತು ಧೈರ್ಯಶಾಲಿ ಕ್ರಮವನ್ನು ಗುರುತಿಸಿ ಕೊಂಕಣ ರೈಲ್ವೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು ಇಬ್ಬರೂ ಆರ್ಪಿಎಫ್ ಸಿಬ್ಬಂದಿಗೆ ತಲಾ 10,000 ರೂ. ಬಹುಮಾನವನ್ನು ಘೋಷಿಸಿದರು.ರಕ್ಷಿಸಲ್ಪಟ್ಟ ಪ್ರಯಾಣಿಕನು ಸಕಾಲಿಕ ಸಹಾಯಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದನು.
ಕೊಂಕಣ ರೈಲ್ವೆ ಇಲಾಖೆ ಪ್ರಯಾಣಿಕರು ಚಲಿಸುವ ರೈಲುಗಳನ್ನು ಹತ್ತಬಾರದು ಅಥವಾ ಇಳಿಯಬಾರದು ಎಂದು ಸೂಚನೆ ನೀಡಿದೆ. ಇಂತಹ ಕ್ರಮಗಳು ಜೀವ ಮತ್ತು ಸುರಕ್ಷತೆಗೆ ತೀವ್ರ ಅಪಾಯವನ್ನುಂಟು ಮಾಡುತ್ತವೆ ಎಂದು ಒತ್ತಿ ಹೇಳಿದೆ. ಪ್ರಯಾಣಿಕರ ಸುರಕ್ಷತೆಯು ರೈಲ್ವೆಯ ಪ್ರಮುಖ ಆದ್ಯತೆಯಾಗಿರುವುದರಿಂದ ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.