ಮಂಗಳೂರು, ನ. 24 (DaijiworldNews/TA): ವಿಮಾನ ನಿಲ್ದಾಣದಿಂದ ದಮಾಮ್ಗೆ ಶನಿವಾರ ರಾತ್ರಿ ಹೊರಡಬೇಕಿದ್ದ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರದ್ದಾದ ಬಗ್ಗೆ ವಿಮಾನಯಾನ ಸಂಸ್ಥೆ ಕೊನೆಯ ಕ್ಷಣದಲ್ಲಿ ಮಾಹಿತಿ ನೀಡಿದ ಪರಿಣಾಮ ಪ್ರಯಾಣಿಕರು ತೊಂದರೆಗೀಡಾದರು.

ರಾತ್ರಿ 11.10ಕ್ಕೆ ನಿಗದಿಯಾಗಿದ್ದ ವಿಮಾನವನ್ನು 11.45ಕ್ಕೆ, ಅನಂತರ 1.40 ಕ್ಕೆ ಮುಂದೂಡಲಾಯಿತು. ಕೊನೆಗೆ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂಬ ಸಂದೇಶ ನೀಡಲಾಯಿತು. ನಿಲ್ದಾಣದಲ್ಲಿ ಸಿಬಂದಿ ಸಹಾಯ ಮಾಡಿಲ್ಲ. ನೀರು ಇಲ್ಲ, ಆಹಾರ ಇಲ್ಲ, ಮಾರ್ಗದರ್ಶನ ನೀಡಲಿಲ್ಲ. ತುಂಬಾ ಸಮಯದವರೆಗೂ ಪ್ರಯಾಣಿಕರನ್ನು ಮನೆಗೆ ಬಿಡಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.