ಉಡುಪಿ, ನ. 23 (DaijiworldNews/AA): ಮಣಿಪಾಲದ ಎರಡು ಹಾಸ್ಟೆಲ್ಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿ, ಅವರಿಂದ ಸುಮಾರು 36,000 ರೂ. ಮೌಲ್ಯದ 727 ಗ್ರಾಂ ಗಾಂಜಾ ಮತ್ತು 30,000 ರೂ. ಮೌಲ್ಯದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ವಿದ್ಯಾರ್ಥಿಗಳನ್ನು ಗುಜರಾತ್ ಮೂಲದ ಕುಶ್ಕೆಯುಶ್ ಪಟೇಲ್ (20) ಮತ್ತು ಉತ್ತರ ಪ್ರದೇಶದ ದೇವಾಂಶ್ ತ್ಯಾಗಿ (22) ಎಂದು ಗುರುತಿಸಲಾಗಿದೆ.
ಆರೋಪಿಗಳು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿಟ್ಟಿದ್ದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.