ಕಾರ್ಕಳ, ನ. 22 (DaijiworldNews/AK): ಶಿವಮೊಗ್ಗದಿಂದ ಮಂಗಳೂರು ಕಡೆಗೆ ಸೇಬು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಶನಿವಾರ ನಸುಕಿನ ಜಾವದಲ್ಲಿ ಬೆಂಕಿಗಾಹುತಿಯಾಗಿ ಭಾರೀ ನಷ್ಟ ಉಂಟಾಗಿದೆ.



ಶನಿವಾರ ನಸುಕಿನ ಜಾವ 2.30ರ ವೇಳೆಗೆ ಈ ಘಟನೆ ಮಾಳ ಎಸ್.ಕೆ ಬಾರ್ಡರ್ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ ಅಗ್ನಿಶಾಮಕ ದಳವು ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದೆ. ಅದಾಗಲೇ ಲಾರಿ ಸಂಪೂರ್ಣ ಹೊತ್ತಿ ಭಸ್ಮವಾಗಿದೆ.
ಇದರಿಂದ ಲಕ್ಷಾಂತರ ಮೌಲ್ಯದ ಲಾರಿ ಹಾಗೂ ಇತರ ಪರಿಕರಗಳು ನಷ್ಟವಾಗಿದೆ. ಕಾರ್ಕಳ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಅಚ್ಚತ ಕರ್ಕೇರಾ, ಹರಿಪ್ರಸಾದ್ ಶೆಟ್ಟಿಗಾರ್, ಮಹಮ್ಮದ್ ಮುಜಾಬಿಲ್, ದಿನೇಶ್, ನಿತ್ಯಾನಂದ ಇವರು ಕಾರ್ಯಚರಣೆಯಲ್ಲಿ ಪಾಲ್ಗೊಂಡರು