ಮಂಗಳೂರು, ನ. 20 (DaijiworldNews/AA): ಬಿಜಾಪುರದ ಜಿಲ್ಲಾ ಕಾರಾಗೃಹದಲ್ಲಿ 14 ವರ್ಷದಿಂದ 35,000 ರೂ. ದಂಡ ಪಾವತಿಸಲಾಗದೆ ಸೆರೆವಾಸ ಅನುಭವಿಸುತ್ತಿದ್ದ ಅಪರಾಧಿಯನ್ನು ದಂಡದ ಹಣ ಪಾವತಿಸಿ ಸಮಾಜ ಸೇವಕ ಗಿರೀಶ್ ಕೊಟ್ಟಾರಿ ಅವರು ಬಿಡುಗಡೆಗೊಳಿಸಿದ್ದಾರೆ.

ಬಂಧಿತ ಆರೋಪಿಗೆ, ದಂಡದ ಹಣ ಕಟ್ಟುವುದಕ್ಕೆ ಅವನ ಕುಟುಂಬಸ್ಥರು ಯಾರು ಮುಂದೆ ಬಂದಿರುವುದಿಲ್ಲ. 4 ತಿಂಗಳ ಹಿಂದೆ ಗಿರೀಶ್ ಕೊಟ್ಟಾರಿ ಅವರು ಆಕಸ್ಮಿಕ ಬಿಜಾಪುರ ಜಿಲ್ಲೆಗೆ ಭೇಟಿ ನೀಡಿದ್ದಾಗ, ಜಿಲ್ಲಾ ಜೈಲು ಅಧಿಕಾರಿಗಳು ಆರೋಪಿಯ ವಿಚಾರವನ್ನ ಅವರ ಗಮನಕ್ಕೆ ತಂದಿದ್ದರು.
ಬಿಜಾಪುರದ ಜಿಲ್ಲಾ ನ್ಯಾಯಾಧೀಶರಾದ ಅರವಿಂದ್ ಸರ್, ಅಡಿಷನಲ್ ಎಸ್.ಪಿ. ರಾಮಣ ಗೌಡ ಸರ್, ವಕೀಲರ ಸಂಘದ ಅಧ್ಯಕ್ಷರಾದ ಬಿರಾದಾರ್, ಜಿಲ್ಲಾ ಜೈಲು ಅಧೀಕ್ಷಕರು ಸಮ್ಮುಖದಲ್ಲಿ ಆರೋಪಿಯನ್ನು ಬಂಧನ ಮುಕ್ತಿ ಗೊಳಿಸುವಂತೆ ಗಿರೀಶ್ ಕೊಟ್ಟಾರಿ ಅವರು ದಂಡದ ಮೊತ್ತವನ್ನು ಜೈಲು ಅಧೀಕ್ಷಕರಿಗೆ ನ.18ರಂದು ಹಸ್ತಾಂತರಿಸಿದರು. ಈ ಮೂಲಕ 14 ವರ್ಷದಿಂದ ಕಾರಾಗೃಹದಲ್ಲಿ ಬಂಧಿತನಾಗಿದ್ದ ಅಪರಾಧಿಗೆ ಬಿಡುಗಡೆ ಭಾಗ್ಯ ಕರುಣಿಸಿದ್ದಾರೆ.