ಪುತ್ತೂರು, ನ. 20 (DaijiworldNews/AK):ಮಾದಕವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದಾತನನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರು ಪೊಲೀಸ್ ರಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ಪುತ್ತೂರು ಕಬಕ ನಿವಾಸಿ ಮಹಮ್ಮದ್ ಮುಸ್ತಪಾ (36) ಎಂದು ಗುರುತಿಸಲಾಗಿದೆ.
ನ.15 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ, ಮುಕ್ರಂಪಾಡಿ ಕಮ್ಮಾಡಿ ಮರದ ಮಿಲ್ ಬಳಿ ವೀಣಾ ಎಂಬವರ ಬಾಬ್ತು ಬಾಡಿಗೆ ಕೋಣೆಯಲ್ಲಿ ಮಹಮ್ಮದ್ ಮುಸ್ತಾಫ ಎಂಬಾತನು ಅಕ್ರಮವಾಗಿ ನಿಷೇದಿತ ಮನೋನ್ಮಾದಕ ವಸ್ತು ಎಂಡಿಎಂಎ ನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲಾಯಿತು.
ಪೊಲೀಸ್ ಉಪನಿರೀಕ್ಷಕ ಜನಾರ್ಧನ ಕೆ.ಎಂ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಸಿಬ್ಬಂದಿಗಳೊಂದಿಗೆ ಸ್ಥಳ ಪರೀಶಿಲಿಸಿದಾಗ, ಬಾಡಿಗೆ ಕೋಣೆಯಲ್ಲಿ ಆರೋಪಿಯು ಅಕ್ರಮವಾಗಿ 14 ಗ್ರಾಂ ನಿಷೇದಿತ ಮಾದಕ ಮನೋನ್ಮಾದಕ ವಸ್ತು ಎಂಡಿಎಂಎ ವನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಆರೋಪಿ ಮಹಮ್ಮದ್ ಮುಸ್ತಪಾ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 109/2025 ಕಲಂ;- 8(C),22(b) NDPS ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಮಹಮ್ಮದ್ ಮುಸ್ತಪಾ ವಿರುದ್ಧ ಈಗಾಗಲೇ ಪುತ್ತೂರು ನಗರ ಠಾಣೆಯಲ್ಲಿ ಅಕ್ರ:141/2015 ಪೋಕ್ಸೊ ಪ್ರಕರಣ ದಾಖಲಾಗಿ, ಸದ್ರಿ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿರುತ್ತದೆ. ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 48/2024, 108/2024 ರಲ್ಲಿ ಮಾದಕವಸ್ತು ಮಾರಾಟದ ಪ್ರಕರಣಗಳು ದಾಖಲಾಗಿವೆ.