ಉಡುಪಿ, ನ. 19 (DaijiworldNews/AA): ಖಾಸಗಿ ಸ್ಲೀಪರ್ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಹೋಟೆಲ್ನ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಘಟನೆ ಓಂತಿಬೆಟ್ಟು ಬಳಿ ಬುಧವಾರ ಮುಂಜಾನೆ ನಡೆದಿದೆ.




ಈ ಬಸ್ ಉಡುಪಿಯಿಂದ ಹಿರಿಯಡ್ಕ ಕಡೆಗೆ ಸಂಚರಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆಯಿಂದ ಬದಿಗೆ ಸರಿದು ಹೋಟೆಲ್ನ ಕಾಂಪೌಂಡ್ಗೆ ಡಿಕ್ಕಿಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ ಪಕ್ಕಕ್ಕೆ ವಾಲಿದ್ದು, ಹೋಟೆಲ್ ಕಟ್ಟಡಕ್ಕೆ ತಾಗಿಕೊಂಡು ನಿಂತಿದೆ.
ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.