ಸುಳ್ಯ,ನ. 19 (DaijiworldNews/AK): ಬೋರುಗುಡ್ಡೆ ಅಬ್ಬುಲ ಅಡ್ಕತ್ಬೈಲ್ ಅವರ ಮನೆಯಲ್ಲಿ ನ.19ರಂದು ಮುಂಜಾನೆ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಸ್ಟೌವ್ ನಲ್ಲಿ ಇದ್ದ ಕುಕ್ಕರ್ ಸಿಡಿದು ಅಡುಗೆಮನೆಗೆ ಹಾನಿಯಾಗಿ ಮನೆಯವರು ಅಪಾಯದಿಂದ ಪಾರಾಗಿರುವ ಘಟನೆ ಸುಳ್ಯದಲ್ಲಿ ವರದಿಯಾಗಿದೆ.

ಬೆಳಗಿನ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಹಠಾತ್ ಸಿಡಿದ ಪರಿಣಾಮ ಅಡುಗೆಮನೆಯ ಗೋಡೆ, ಟೈಲ್ಸ್, ಮೇಲ್ಚಾವಣಿ ಹಾಗೂ ಅಡುಗೆ ಸಾಮಾನುಗಳು ಹಾನಿಗೊಳಗೊಂಡಿವೆ.
ಘಟನೆ ಸಂಭವಿಸಿದ ವೇಳೆ ಮನೆಮಂದಿ ಅಡುಗೆಮನೆ ಸಮೀಪದಲ್ಲೇ ಇದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.