ಮಂಗಳೂರು, ನ. 19 (DaijiworldNews/AK):ರೊಜಾರಿಯೋ ಪ್ರೌಢಶಾಲೆ ಮಂಗಳೂರು ಇದರ ಹಳೇ ವಿದ್ಯಾರ್ಥಿ ವೃಂದ ಹಾಗೂ ಅಧ್ಯಾಪಕರ ಮಹಾ ಸಂಗಮದ ಸುವರ್ಣ ಮಹೋತ್ಸವ ಸಮಾರಂಭ ನವೆಂಬರ್ 15 ರಂದು ನಡೆಯಿತು.

ಅತಿಥಿ ಗಣ್ಯರಲ್ಲಿ ಗೈರಾದ ಒಬ್ಬರಲ್ಲಿ ಕು|ಗ್ರೇಸಿ ಲಸ್ರಾದೊ ಅಧ್ಯಾಪಕರನ್ನು ಅವರ ಸ್ವಗೃಹದಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ವೃಂದದಲ್ಲಿ ಪಿ ಎ ಬಾಬು ( ಶಾನು), ಪ್ರದೀಪ್ ಕುಮಾರ್, ಆಲ್ಬರ್ಟ್ ಡಿ'ಸಿಲ್ವಾ, ಉದಯ್ ಸಿ ಎಚ್ ಹಾಗೂ ರಾಮ್ ಕುಮಾರ್ ಪಿ ಉಪಸ್ಥಿತರಿದ್ದರು.