ಮಂಗಳೂರು, ನ. 16 (DaijiworldNews/AK):ನಗರದ ಹೋಲಿ ರುಜಾರಿಯೋ ಕ್ಯಾಥೇಡ್ರಲ್ ಮಿನಿ ಹಾಲ್ ನಲ್ಲಿ ನ.15 ರಂದು ಬೆಳಗ್ಗೆ 11 ಗಂಟೆ ಗೆ ರೊಜಾರಿಯೋ ಪ್ರೌಢಶಾಲೆ ಮಂಗಳೂರು ಇದರ ವಿದ್ಯಾರ್ಥಿ ಹಾಗೂ ಅಧ್ಯಾಪಕರ ಮಹಾ ಸಂಗಮದ ಸುವರ್ಣ ಮಹೋತ್ಸವ ಸಮಾರಂಭವು ನಾಗೇಶ್ ಕುಮಾರ್ ಎನ್ ಜೆ ಇವರ ಸಭಾಧ್ಯಕ್ಷತೆ ಯಲ್ಲಿ ಜರುಗಿತು.


ಮುಖ್ಯ ಅತಿಥಿಗಳಾಗಿ ವಲೇರಿಯನ್ ಮೊರಾಸ್, ಜನಾರ್ಧನ ರಾವ್ ಪಿ, ಸತುರಿನಿನ್ ಮಸ್ಕರೇನ್ಹಸ್ ಬಿ ಗಣೇಶ್ ಸೋಮಯಾಜಿ, ಜೆಸಿಂತಾ ಮೋರಾಸ್, ಲೀನಾ ಮಸ್ಕರೇನ್ಹಸ್, ಐರಿಸ್ ಪಿರೇರಾ ಕ್ಲಾಡಿಯ ಮಸ್ಕರೇನ್ಹಸ್ ಹಾಗೂ ಹಳೇ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಜರುಗಿತು.
ಕಾರ್ಯಕ್ರಮವು ಅತಿಥಿ ಗಣ್ಯರಿಂದ ವಿಧ್ಯುಕ್ತವಾಗಿ ಉದ್ಘಾಟನೆಗೊಂಡು, ವಿದ್ಯಾರ್ಥಿ ವೃಂದದಿಂದ ಸಾಂಕೇತಿಕವಾಗಿ ದಿವಾಕರ್ ವಿ ವಿ ಯವರ ಉಸ್ತುವಾರಿಯಲ್ಲಿ ಗುರು ಪಾದ ಪೂಜೆ ಯು ನಡೆಯಿತು. ಸಮಾರಂಭದ ಕೇಂದ್ರ ಬಿಂದು ಆಗಿರುವ ಎಲ್ಲಾ ನಿವೃತ್ತ ಅಧ್ಯಾಪಕರು ವಿದ್ಯಾರ್ಥಿ ವೃಂದದಿಂದ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ, ಹಾಗೂ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಿ ಕೊಂಡು ,ತದನಂತರ ಪ್ರತಿಫಲವೆಂಬತ್ತೆ ಅಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಲಾಯಿತು.
ವಿಶೇಷವಾಗಿ ಈ ಹಳೇ ವಿದ್ಯಾರ್ಥಿ ಸಂಘಟನೆಯ ಮುಖ್ಯ ರೂವಾರಿ ಪಿ ಎ ಬಾಬು( ,*ಶಾನು), ನಾಗೇಶ್ ಕುಮಾರ್, ದಿವಾಕರ್ ಹಾಗೂ ರಾಮ್ ಕುಮಾರ್ ಸನ್ಮಾನ ಪಡಕೊಂಡರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವು ವಿದ್ಯಾರ್ಥಿ ವೃಂದ ಹಾಗೂ ಅಧ್ಯಾಪಕರುಗಳ ಕೂಡುವಿಕೆ ಯಲ್ಲಿ ನಡೆಯಿತು.
ಆರಂಭದಲ್ಲಿ ಹಳೇ ವಿದ್ಯಾರ್ಥಿಯಾದ ದಿವಾಕರ್ ವಿ ವಿ ಯಿಂದ ಪ್ರಾರ್ಥನೆ,ಮಹಮ್ಮದ್ ಹುಸೇನ್ ರವರಿಂದ ಸ್ವಾಗತ ಭಾಷಣ, ಇಡೀ ಕಾರ್ಯಕ್ರಮದ ನಿರೂನಪಣೆಯನ್ನು ರಾಮ್ ಕುಮಾರ್ ನಿರ್ವಹಿಸಿ, ಪ್ರದೀಪ್ ಕುಮಾರ್ ರವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.