ಮಂಗಳೂರು, ನ. 16 (DaijiworldNews/AA): ದೇರಳಕಟ್ಟೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ವಿದ್ಯಾರ್ಥಿಯು ಕೇರಳದ ಪಾಲಕ್ಕಾಡ್ ಮೂಲದ ರಬಿಯಾ ಮತ್ತು ಅಬೂಬಕರ್ ಅವರ ಪುತ್ರ ಮಲಿಕ್ ಅಬೂಬಕರ್ ಎಂದು ಗುರುತಿಸಲಾಗಿದೆ. ಈತ ದೇರಳಕಟ್ಟೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಎನ್ವೈಎಸ್ ಅಧ್ಯಯನ ಮಾಡುತ್ತಿದ್ದು, ಅಬ್ದುಲ್ ಷರೀಫ್ ಅವರಿಗೆ ಸೇರಿದ ಪಿಜಿ ವಸತಿಯಲ್ಲಿ ವಾಸಿಸುತ್ತಿದ್ದನು.
ವರದಿಗಳ ಪ್ರಕಾರ, ನವೆಂಬರ್ 13ರ ರಾತ್ರಿ ಮಲಿಕ್ ಊಟಕ್ಕೆ ಹೊರಗೆ ಹೋಗುವುದಾಗಿ ತನ್ನ ಪಿಜಿಯಿಂದ ಹೋಗಿದ್ದಾನೆ. ಆದರೆ ನಂತರ ಹಿಂತಿರುಗದೆ ನಾಪತ್ತೆಯಾಗಿದ್ದಾನೆ.
ಮಲಿಕ್ನ ಸೋದರಮಾವ ಹಾಗೂ ಫಿಸಿಯೋಥೆರಪಿ ವೈದ್ಯರಾದ ಅಜ್ಮಲ್ ಟಿ.ಎ. ಅವರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.