ಮಂಗಳೂರು, ನ. 15 (DaijiworldNews/AA): ಪ್ರಗತಿ ಕೋ-ಆಪರೇಟಿವ್ ಸೊಸೈಟಿ (ನಿ) ಕುಲಶೇಖರ ಇದರ ಸಾಮಾಜಿಕ ಜಾಲತಾಣ(ವೆಬ್ಸೈಟ್) ಬಿಡುಗಡೆ ಸಮಾರಂಭ ಕುಲಶೇಖರದ ಕೊರ್ಡೆಲ್ ಚರ್ಚ್ ಹಾಲ್ನಲ್ಲಿ ನವೆಂಬರ್ 13ರಂದು ನೆರವೇರಿತು.



















ಕೊರ್ಡೆಲ್ ಇಗರ್ಜಿಯ ಪ್ರಧಾನ ಧರ್ಮಗುರು ವಂದನೀಯ ಕ್ಲಿಪರ್ಡ್ ಫೆರ್ನಾಂಡಿಸ್ ಅವರು ಅನಾವರಣಗೊಳಿಸಿ ದೇವರ ವಾಕ್ಯದೊಂದಿಗೆ ಆಶೀರ್ವಾಚನಗೈದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಮಂಗಳೂರು ಉಪ ವಿಭಾಗದ ತ್ರಿವೇಣಿ ರಾವ್.ಕೆ ಸೇವೆಯ ಜೊತೆಗೆ ಗ್ರಾಹಕರನ್ನು ಸೆಳೆದು ಉತ್ತಮ ಸೇವೆ ನೀಡಿ ವೃತ್ತಿಯಲ್ಲಿ ಆಸಕ್ತಿ ವಹಿಸಿ ಎಂದು ಸೂಚಿಸಿದರು.
ದಾಯ್ಜಿವರ್ಲ್ಡ್ ಮಾಧ್ಯಮದ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತಾವ್ರೋ ಅವರು ಆಧುನಿಕ ತಂತ್ರಜ್ಞಾನದ ಬಗ್ಗೆ ವಿವರಣೆ ನೀಡಿ ಉತ್ತರೋತ್ತರವಾಗಿ ಪ್ರಗತಿ ಸಂಸ್ಥೆಯು ಪ್ರಗತಿ ಪಥದಲ್ಲಿ ಅಭಿವೃದ್ಧಿ ಹೊಂದಿ ಸದಾ ಯಶಸ್ಸನ್ನು ಕಾಣಲಿ ಎಂದು ಶುಭ ನುಡಿದರು.
ನಿರ್ದೇಶಕರಾದ ರೋಮನ್ ಬಾಸಿಲ್ ಲೋಬೋ ಅವರು ಸಾಮಾಜಿಕ ಜಾಲಾತಾಣದ ಬಗ್ಗೆ ಸಂಕ್ಷಿಪ್ತವಾಗಿ ಸಭೆಗೆ ಮಾಹಿತಿ ನೀಡಿದರು.
ಪ್ರಗತಿ ಸಹಕಾರಿ ಸಂಘದ ಅಧ್ಯಕ್ಷರಾದ ಜೊಸ್ಸಿ ಸಿಕ್ವೇರಾ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ನಿರ್ದೇಶಕರಾದ ಡೊನಾಲ್ಡ್ ಬಂಟ್ವಾಳ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಭೆಯ ಬಳಿಕ ಪ್ರಗತಿ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ತ್ರಿವೇಣಿ ರಾವ್.ಕೆ ಅವರು ಸಹಕಾರಿ ಸಂಘದ ನಿಯಮಗಳ ಬಗ್ಗೆ ಹಾಗೂ ಸಂಸ್ಥೆಯನ್ನು ಹೇಗೆ ಅಭಿವೃದ್ಧಿಗೊಳಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
ನಿರ್ದೇಶಕರಾದ ಕಿರಣ್ ಕ್ಯಾಸ್ತೇಲಿನೋ, ಸ್ಟ್ಯಾನಿ ಆಳ್ವಾರಿಸ್, ವಿನ್ನಿ ಡಿ.ಸೋಜಾ, ಅಲಿಸ್ ಲೋಬೋ, ರೋಹನ್ ಡಿ.ಸಿಲ್ವಾ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಲ್ಯಾನ್ಸಿ ಪೈಸ್ ಅವರು ವಂದಿಸಿದರು.
https://www.pragathicoopsociety.com/en