ಬಂಟ್ವಾಳ ನ. 11 (DaijiworldNews/AK):ಶತಮಾನೋತ್ಸವ ಸಂಭ್ರಮದಲ್ಲಿ ಸಿದ್ದಕಟ್ಟೆ ಚರ್ಚಿನ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ನವೀಕೃತ ದೇಗುಲದ ಪ್ರಮುಖ ಪ್ರವೇಶ ದ್ವಾರದ ಆಶೀರ್ವಚನ ಭಕ್ತರ ಸಮ್ಮುಖದಲ್ಲಿ ನೆರವೇರಿತು.




ಚರ್ಚಿನ ಧರ್ಮ ಗುರುಗಳಾದ ವಂದನೀಯ ಡೇನಿಯಲ್ ಡಿಸೋಜ ಮತ್ತು ಸ್ಥಳೀಯ ಧರ್ಮ ಗುರುಗಳಾದ ವಂದನೀಯ ಮ್ಯಾಕ್ಸಿಮ್ ಡಾಯಸ್ ಪ್ರಾರ್ಥನೆ ಮೂಲಕ ದ್ವಾರದ ಆಶೀರ್ವಚನಗೈದರು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸುನಿಲ್ ಸಿಕ್ವೇರಾರವರು ಸರ್ವರ ಕೃತಜ್ಞತೆಗೆದರು. ಪ್ರವೇಶ ದ್ವಾರದ ಪ್ರಮುಖ ದಾನಿಗಳಾದ ಶ್ರೀ ಗಾಡ್ವಿನ್ ಸೀಮಾ ಮೋರಾಸ್ , ಶ್ರೀ ರೋಶನ್ ಕ್ರಿಶಲ್ ಮೋರಾಸ್ ಕುಟುಂಬಸ್ಥರು , ಪಾಲನಾ ಪರಿಷತ್ ಸದಸ್ಯರು, ನವೀಕರಣ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು .
2026 ಜನವರಿ 22ರಂದು ನವೀಕೃತ ಚರ್ಚಿನ ಆಶೀರ್ವಚನವು ನೆರವೇರಲಿದೆ. ಅಭಿವೃದ್ಧಿ ಕಾಮಗಾರಿಯು ಪ್ರಗತಿಯಲ್ಲಿದೆ. ಭಕ್ತಾದಿಗಳ ಸಹಕಾರವನ್ನು ಧರ್ಮ ಗುರುಗಳು ಸ್ಮರಿಸಿದರು.