ಮಂಗಳೂರು, ನ. 06 (DaijiworldNews/TA): ಕೆನರಾ ಬ್ಯಾಂಕ್ ವತಿಯಿಂದ ಸಿಎಸ್ಆರ್ ನಿಧಿಯಿಂದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಸ್ಥನದಲ್ಲಿ ನೂತನ ತಂತ್ರಜ್ಞಾನದ ಇ ಹುಂಡಿ ಅನುಷ್ಠಾನ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಮಂಗಳೂರಿನ ಕದ್ರಿ ದೇವಾಸ್ಥನದಲ್ಲಿ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ನೂತನ ಇ ಹುಂಡಿ ಯೋಜನೆಗೆ ಕೆನರಾ ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಭವೇಂದ್ರ ಕುಮಾರ್, ಕೆನರಾ ಬ್ಯಾಂಕ್ ಮಂಗಳೂರು ಸರ್ಕಲ್ ಜನ್ರಲ್ ಮ್ಯಾನೇಜರ್ ಮಂಜುನಾಥ್ ಸಿಂಗೈ, ಕೆನರಾ ಬ್ಯಾಂಕ್ ಮಂಗಳೂರು ರೀಜಿನಲ್ ಡಿಜಿಎಂ ಲತಾ ಕುರೂಪ್, ಕೆನರಾ ಬ್ಯಾಂಕ್ ಮಂಗಳೂರು ಸರ್ಕಲ್ ಆಫೀಸ್ ಡಿಜಿಎಂ ಶೈಲೇಂದ್ರ ನಾಥ್, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನ ಸಮೀತಿ ಸದಸ್ಯ ದಿಲ್ರಾಜ್ ಆಳ್ವ, ಕದ್ರಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಲತಾ ಇತರ ಗಣ್ಯರು ಸೇರಿ ಚಾಲನೆ ನೀಡಿದರು.
ಈ ವೇಳೆ ಕೆನರಾ ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಭವೇಂದ್ರ ಕುಮಾರ್ ಮಾತನಾಡಿ ಕೆನರಾ ಬ್ಯಾಂಕ್ ದೇಶಕ್ಕೆ ಈ ಭಾಗದ ಒಂದು ಅಮೋಘ ಕೊಡುಗೆ ಅಂತ ಬ್ಯಾಂಕ್ ಸಂಸ್ಥಾಪಕರ ನಾಡಿನಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಅದ್ರಲ್ಲೂ ಕೆನರಾ ಬ್ಯಾಂಕ್ ವರ್ಷಂಪ್ರತಿ ವಿದ್ಯಾರ್ಥಿನಿಯ ಉತ್ತಮ ಕಲಿಕೆಗಾಗಿ ಕೋಟಿ ರೂಪಾಯಿಯ ವಿದ್ಯಾರ್ಥಿ ವೇತನ ನೀಡುತ್ತ ಬಂದಿದೆ ಅದ್ರೊಂದಿ ಇತರ ಸಮಾಜ ಮುಖಿ ಕಾರ್ಯಗಳನ್ನು ನಮ್ಮ ಸಂಸ್ಥೆ ಮಾಡಿದೆ ಎಂದು ಹೇಳಳು ಹೆಮ್ಮೆ ಆಗುತ್ತೆ. ಇನ್ನೂ ಇಂದು ಮಂಗಳೂರಿನ ಕದ್ರಿ ದೇವಾಲಯದಲ್ಲಿ ಭಕ್ತರಿಗಾಗಿ ಇ ಹುಂಡಿ ವ್ಯವಸ್ಥೆ ಜಾರಿಗೆ ತರಲಾಗಿದೆ ಇದರ ಸದುಪಯೋಗ ಪಡೆಯಿರಿ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಡಿಜಿಎಂ ವಿಜಯ ಶ್ರೀ, ಎಜಿಎಂ ನರೇಶ್ ಕುಮಾರ್, ಕದ್ರಿ ಬ್ರಾಂಚ್ ಚೀಫ್ ಮ್ಯಾನೇಜರ್ ರಾಜೀವ್ ರಂಜನ್, ಮಂಗಳೂರು ರೀಜಿನಲ್ ಆಪೀಸ್ ಎಜಿಎಂ ಸಂಜಯ್ ಕುಮಾರ್ ತ್ರಿವೇದಿ, ಕೆನರ ಬ್ಯಾಂಕ್ ಆಫೀಸರ್ ಅಸೋಷಿಯೇಷನ್ ಆರ್ಗನೈಷಿಯೆಷನ್ ಜನ್ರಲ್ ಮ್ಯಾನೇಜರ್ ಎಸ್ ರಮೇಶ್ ನಾಯ್ಕ್, ಕದ್ರಿ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಜೇಂದ್ರ ಚಿಲಿಂಬಿ, ಕಿರಣ್ ಕುಮಾರ್ ಜೆ, ಉಷಾ ಪ್ರಭಾಕರ್, ಪ್ರೀತಾನಂದನ್ ಮತ್ತಿತರರು ಉಪಸ್ಥಿತರಿದ್ದರು.