ಮಂಗಳೂರು, ನ. 04 (DaijiworldNews/AK):ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿ, ಕೊಡುಗೈ ದಾನಿಯಾಗಿ ಗುರುತಿಸಿದ್ದ ಹಾಶೀಂ ಖಾನ್ ಅವರು ತನ್ನ ಹುಟ್ಟೂರು ಉತ್ತರ ಪ್ರದೇಶದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದೂರದ ಉತ್ತರ ಪ್ರದೇಶದಿಂದ ಉದ್ಯೋಗ ನಿಮಿತ್ತ ಸಣ್ಣ ವಯಸ್ಸಿನಲ್ಲೇ ಮಂಗಳೂರಿಗೆ ಆಗಮಿಸಿದ್ದ ಅವರು ಬಳಿಕ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಅಷ್ಟೇ ಅಲ್ಲ ಬಡವರ ಕಷ್ಟ ಅರಿತು ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ಅದೆಷ್ಟೋ ಬಡಕುಟುಂಬಗಳಿಗೆ ತಾವೇ ಖುದ್ದು ಆಹಾರ ಸಾಮಾಗ್ರಿಗಳನ್ನು ನೀಡಿರುವುದಾಗಿ ಜನ ಸ್ಮರಿಸಿಕೊಳ್ಳುತ್ತಿದ್ದಾರೆ.
ಹುಟ್ಟೂರು ಉತ್ತರ ಪ್ರದೇಶಕ್ಕೆ ಕಾರ್ಯಕ್ರಮವೊಂದರ ನಿಮಿತ್ತ ತೆರಳಿದ್ದ ಅವರು ಊರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರ ಅಕಾಲಿಕ ನಿಧನಕ್ಕೆ ಹಾಜಿ ಪಿ.ಪಿ. ಅಬ್ದುಲ್ ಮಜೀದ್, ಹಾಜಿ ಯುಕೆಬಿ ಇಬ್ರಾಹಿಂ, ಹಾಜಿ ಪಿಪಿ ಮುನ್ನ, ಹಾಜಿ ಯಾಸಿನ್ ಕುದ್ರೋಳಿ, ಬಶೀರ್ ಕ್ರಿಸ್ಟಲ್, ಲತೀಫ್, ಅಝ್ಮಲ್ ಟು ಸ್ಟಾರ್, ಜಮಾಲ್, ಮೆಹಫಿಲೆ ಶಮಾ, ಕುದ್ರೋಳಿ ಐಕ್ಯತಾ ವೇದಿಕೆ ಸಂತಾಪ ಸೂಚಿಸಿದೆ.