ಮಂಗಳೂರು, ನ. 04 (DaijiworldNews/TA): ಬಂಗಾಲ ಕೊಲ್ಲಿಯಲ್ಲಿ ನಿಮ್ನ ಒತ್ತಡದ ಲಕ್ಷಣ ಕಾಣಿಸಿದ್ದು, ಇದರಿಂದಾಗಿ ನ. 4ರ ಬಳಿಕ ಕರಾವಳಿಯ ಕೆಲವೆಡೆ ಒಂದೆರಡು ದಿನ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಕಟನೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನ. 5 ರಿಂದ 7ರ ವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ರವಿವಾರ ಮಳೆ ಕ್ಷೀಣಗೊಂಡಿತ್ತು.
ರವಿವಾರ ಮೋಡ, ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಸೆಕೆಯ ತೀವ್ರತೆಯೂ ಇತ್ತು. ಉಡುಪಿ ಜಿಲ್ಲೆಯ ಕೆಲವೆಡೆ ಮೋಡ ಮತ್ತು ಬಿಸಿಲಿನ ವಾತಾವರಣದ ನಡುವೆ ತುಂತುರು ಮಳೆಯಾಗಿದೆ. ಎರಡು ದಿನಗಳಿಂದ ಉತ್ತಮ ಬಿಸಿಲು ಇದ್ದುದರಿಂದ ಭತ್ತದ ಕಟಾವು ಭರದಿಂದ ಸಾಗುತ್ತಿದೆ. ಮತ್ತೆ ಮಳೆ ಆರಂಭವಾದರೆ ಇದಕ್ಕೆ ಸಮಸ್ಯೆಯಾಗಲಿದೆ.