ಸುಳ್ಯ, ನ. 03 (DaijiworldNews/AA): ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಬಗ್ಗೆ ಮಾಜಿ ಸ್ಪೀಕರ್ ಕಾಗೇರಿ ಮತ್ತು ಪ್ರತಿಪಕ್ಷಗಳ ಕೆಲವು ಶಾಸಕರು ಮಾಡಿರುವ ಆಧಾರ ರಹಿತ ಆರೋಪ ದುರುದ್ದೇಶ ಪೂರಿತವಾಗಿದೆ. ಪ್ರಚಾರಕ್ಕಾಗಿ ಆರೋಪ ಮಾಡಿದ್ದು ಇದನ್ನು ಕಟುವಾದ ಶಬ್ದಗಳಿಂದ ಖಂಡಿಸುತ್ತೇನೆ ಎಂದು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಹೇಳಿದ್ದಾರೆ.

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಹಿಂದಿನ ಸಭಾಪತಿಗಳು ಅಧಿಕಾರ ದುರುಪಯೋಗ, ಸ್ವೇಚಾಚ್ಚಾರ, ಸ್ವಜನ ಪಕ್ಷಪಾತ ಮಾಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ವಿನಃ ಕಾರಣ ಕೋಮು ಭಾವನೆ ಕೆರಳಿಸಿ ಮತ ಗಳಿಸುವ ಉದ್ದೇಶ ಮಾತ್ರ, ಜಿಲ್ಲೆಗೆ ಅವರ ಕೊಡುಗೆ ಏನು?" ಎಂದು ಪ್ರಶ್ನಿಸಿದರು.
ಖಾದರ್ ಅವರು ಎಲ್ಲಾ ಜಾತಿ ಧರ್ಮ ಪಕ್ಷದವರನ್ನು ಒಂದೇ ಭಾವಣೆಯಲ್ಲಿ ನೋಡುತ್ತಿದ್ದು ಅವರನ್ನು ನೋಡಿ ಮಾದರಿಯಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಜೊತೆಗೆ ವಿಶ್ವೇಶ್ವರ ಕಾಗೇರಿ ಮತ್ತು ಬೋಪಯ್ಯ ಅವರ ಅವಧಿಯಲ್ಲಿ ಆದ ಹಣಕಾಸಿನ ಬಿಡುಗಡೆ ಬಗ್ಗೆ ತನಿಖೆಗೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.