ಉಡುಪಿ,ನ. 03 (DaijiworldNews/AK):ಕಿಶೂ ಎಂಟರ್ಪ್ರೈಸಸ್ ಸಹಯೋಗದೊಂದಿಗೆ ದಾಯ್ಜಿವರ್ಲ್ಡ್ ಉಡುಪಿ ಆಯೋಜಿಸಿದ್ದ 'ಯಶೋಧ ಕೃಷ್ಣ' ಮತ್ತು 'ಬೆಣ್ಣೆ ಕೃಷ್ಣ' ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ನವೆಂಬರ್ 2 ರ ಭಾನುವಾರ ಕನ್ನರ್ಪಾಡಿಯ ಸೇಂಟ್ ಮೇರಿಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.














ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಎರಡು ವಿಭಾಗಗಳು ಇದ್ದವು. ಯಶೋಧಾ ಕೃಷ್ಣ (0-2 ವರ್ಷಗಳು) ಮತ್ತು ಬೆಣ್ಣೆ ಕೃಷ್ಣ (2-6 ವರ್ಷಗಳು).
ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಗೆದ್ದವರಿಗೆ ಕ್ರಮವಾಗಿ 5,000, 3,000 ಮತ್ತು 2,000 ರೂ. ನಗದು ಬಹುಮಾನಗಳನ್ನು ನೀಡಲಾಯಿತು, ಜೊತೆಗೆ ಪ್ರತಿ ವಿಭಾಗಕ್ಕೂ ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಸಮಾಧಾನಕರ ಬಹುಮಾನ ವಿಜೇತರಿಗೆ ತಲಾ 1,000 ರೂ. ಜೊತೆಗೆ ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು.
ಖ್ಯಾತ ನಿರೂಪಕ ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಕ್ರೆಡೈ ಉಡುಪಿ ಅಧ್ಯಕ್ಷ ಮತ್ತು ಕೀರ್ತಿ ಕನ್ಸ್ಟ್ರಕ್ಷನ್ಸ್ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಶೆಟ್ಟಿ, ಕಿಶೂ ಎಂಟರ್ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಗೊನ್ಸಾಲ್ವಿಸ್; ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋ ವ್ಯವಸ್ಥಾಪಕ ಕೆವಿನ್ ರೊಡ್ರಿಗಸ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗಾಯಕ ವಿದ್ವಾನ್ ಯಶವಂತ್ ಎಂಜಿ, ಕ್ರೆಡೈ ಉಡುಪಿ ಅಧ್ಯಕ್ಷ ಮತ್ತು ಕೀರ್ತಿ ಕನ್ಸ್ಟ್ರಕ್ಷನ್ಸ್ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಶೆಟ್ಟಿ, ಹಾಟ್ ಚಿಕ್ಸ್ ರೆಸ್ಟೋರೆಂಟ್ ಮಾಲೀಕ ಡಾಲ್ಫಿ ಮಸ್ಕರೇನ್ಹಸ್; ಉಡುಪಿಯ ಕಂಡೀರಾ ಸಾಮಾಜಿಕ ಜಾಲತಾಣದ ಮಂಜುನಾಥ್ ಕಾಮತ್; ಸಂಗೀತ ನಿರ್ದೇಶಕ ಅರುಣ್ ಹಾವಂಜೆ; ದರ್ಪಣ ನೃತ್ಯ ತಂಡದ ರಕ್ಷಾ; ಕಿಶೂ ಎಂಟರ್ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಗೊನ್ಸಾಲ್ವಿಸ್; ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋ ವ್ಯವಸ್ಥಾಪಕ ಕೆವಿನ್ ರೊಡ್ರಿಗಸ್, ದಾಯ್ಜಿವಲ್ಡ್ ಉಡುಪಿ ಅಕೌಂಟೆಂಟ್ ನೇಹಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಫಲಿತಾಂಶಗಳು ಹೀಗಿದೆ:
ಯಶೋದಾ ಕೃಷ್ಣ (0–2 ವರ್ಷ)
ಪ್ರಥಮ – ಶ್ರೀಹಾನ್ ಸಾಯೀಶ್ ವಿ
ದ್ವಿತೀಯ – ಅರಿವ್ ಆರ್ ಕುಮಾರ್
ತೃತೀಯ – ವಾಮಿಕಾ ಪಿ
ಸಮಾಧಾನಕರ ಬಹುಮಾನಗಳು: ರಿಶಾನ್ವಿ ಎಸ್ ಕೋಟ್ಯಾನ್, ಅದ್ವೈತ್ ಆರ್ ದೇವಾಡಿಗ, ಸಾಹಿತಿ ಎಸ್.ಕೆ.
ಬೆಣ್ಣೆ ಕೃಷ್ಣ (2–6 ವರ್ಷ)
ಪ್ರಥಮ – ಮಿಥಾಲಿ ವಿ ಶೆಣೈ
ದ್ವಿತೀಯ – ಇಶಾನ್ವಿ ನವೀನ್ ಸುವರ್ಣ
ತೃತೀಯ – ಲಿತಿಕ್ಷಾ ಕುಲಾಲ್
ಸಮಾಧಾನಕರ ಬಹುಮಾನ: ಶಾನ್ವಿ ಎಂ ಕುಲಾಲ್, ಸುಧಾನ್ಯ ಭಟ್, ಪ್ರಣವಿ ಎಸ್ ಕೋಟ್ಯಾನ್