ಬಂಟ್ವಾಳ, ಅ. 30(DaijiworldNews/TA): ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ‘ಯುವ ಪ್ರೇರಣೆ - 2025 ಬ್ಯಾಂಕಿಂಗ್ ಸಾಲ ಮತ್ತು ಸ್ವಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ಕೆನರಾ ಬ್ಯಾಂಕಿನ ಸೀನಿಯರ್ ಮೆನೇಜರ್ ಪುರಂದರ ಉದ್ಘಾಟಿಸಿದರು. ಉದ್ಯಮಿ ಗಂಗಾಧರ ಸೇರಾ, ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹನ್ನೊಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಏಷ್ಯಾ ಡೆಫ್ ರಾಪಿಡ್ ಚಾಂಪಿಯನ್ ಚೆಸ್ನಲ್ಲಿ ಚಿನ್ನದ ಪದಕ ವಿಜೇತೆ ಅಂತಾರಾಷ್ಟ್ರೀಯ ಚೆಸ್ ಆಟಗಾರ್ತಿ ಯಶಸ್ವಿ ಕುಲಾಲ್ ಅವರನ್ಮು ಸನ್ಮಾನಿಸಲಾಯಿತು.
ಇದೇ ಸಂದರ್ಭ ಕೊಡಗು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಮೂಲ್ಯ, ಕುಲಾಲ ಯುವವೇದಿಕೆಯ ಜಿಲ್ಲಾಧ್ಯಕ್ಷ ಲ. ಅನಿಲ್ದಾಸ್, ನಾಸಿಕ್ ಹೊಟೇಲ್ ಉದ್ಯಮಿ ಗಣೇಶ್ ಬಂಗೇರ ಭಂಡಾರಿಬೆಟ್ಟು, ಪದ್ಮಿನಿ ದೇವಣ್ಣ, ಉದ್ಯಮಿ ದಯಾಯೋಗೀಶ್, ಸಿದ್ದಕಟ್ಟೆ ಸರಕಾರಿ ಪದವಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಅಭಿನಂದನ್ ಕುಲಾಲ್, ಮಂಗಳೂರು ವಿಶ್ವವಿದ್ಯಾನಿಲಯ ನೆಲ್ಯಾಡಿ ಘಟಕ ಕಾಲೇಜಿನ ಉಪನ್ಯಾಸಕ ಡಾ. ಆನಂದ್ ಎಮ್. ಕಿದೂರು, ಹಿರಿಯ ವರದಿಗಾರ ವಿನೋದ್ ಪುದು, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.