ಬಂಟ್ವಾಳ , ಅ. 29 (DaijiworldNews/AK):ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ @ ಕೇಶವ ( 37) ಕಾಣೆಯಾದವರು.

ದೂರಿನಲ್ಲಿ ಏನಿದು?
ದೂರುದಾರರ ಪ್ರಕಾರ, ಮೊಡಾಂಕಾಪುವಿನಲ್ಲಿರುವ 7Spices India Pvt Ltd ನಲ್ಲಿ ಸೆಲ್ಸ್ ಮ್ಯಾನ ಆಗಿ ಕೆಲಸ ಮಾಡುತ್ತಿದ್ದ ಚೆನ್ನಕೇಶವ ಅವರು, ಎಂದಿನಂತೆ ಅ.25ರಂದು ಮನೆಯಿಂದ ಹೋಗಿ ಅಲ್ಲಿಂದ ಮಸಾಲೆ ಪದಾರ್ಥಗಳನ್ನು ಲೈನ್ ಸೆಲ್ಸ ಬಗ್ಗೆ ವಾಹನದಲ್ಲಿ ಚಾಲಕ ಹರಿದಾಸ್ ರವರ ಜೊತೆಗೆ ಹೋಗಿ ಲೈನ್ ಕೆಲಸ ಮುಗಿಸಿ ಮಧ್ಯಾಹ್ನ 2.30 ಗಂಟೆಗೆ ಪಂಪುವೆಲ್ನಲ್ಲಿ ಇಳಿದು ಬೇರೆ ಕೆಲಸ ಮುಗಿಸಿ ಕಂಪೆನಿಗೆ ಬರುವುದಾಗಿ ತಿಳಿಸಿ ಹೋಗಿದ್ದರು.
ನಂತರ ಮದ್ಯಾಹ್ನ 3.30 ಗಂಟೆಗೆ ಚನ್ನಕೇಶವ @ ಕೇಶವ ಅವರು ದೂರುದಾರ ಅತ್ತಿಗೆಗೆ ಕರೆ ಮಾಡಿ ತಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದು, ಮೊಬೈಲ್ನಲ್ಲಿ ಚಾರ್ಜ್ ಇಲ್ಲದ ಕಾರಣ ಸ್ವಿಚ್ ಆಫ್ ಆಗುತ್ತದೆ. ನಾಲ್ಕು ದಿನ ಬಿಟ್ಟು ಕರೆ ಮಾಡುವುದಾಗಿ ತಿಳಿಸಿ ಈವರೆಗೆ ಕರೆ ಮಾಡಿರುವುದಿಲ್ಲ.
ಚನ್ನಕೇಶವ ಸಂಬಂಧಿಕರ ಮನೆಗೂ ,ಕಂಪೆನಿಯ ಕೆಲಸಕ್ಕೂ ಹಾಗೂ ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಕಾಣೆಯಾದ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ( ಮೊ.9535971261) ಅವರನ್ನು ಸಂಪರ್ಕಿಸಲು ಕೋರಲಾಗಿದೆ.