ಮಂಗಳೂರು, ಅ. 28 (DaijiworldNews/AK):ಸುರತ್ಕಲ್ ಆಪದ್ಬಾಂಧವ ಸಮಾಜ ಸೇವಾ ಸಂಘ( ರಿ) ಇಡ್ಯಾ ಸುರತ್ಕಲ್ ಸಂಘಟನೆಯಿಂದ ಪ್ರತಿ ವರ್ಷ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.





ಭಾರತೀಯ ವಾಯು ಸೇನೆಯ ಬೆಂಗಳೂರಿನ ಟ್ರೈನಿಂಗ್ ಕಮಾಂಡ್ ಸಾರ್ಜೆಂಟ್ ಮಣಿೇಂದ್ರ ಕೆ ಸಾಲ್ಯಾನ್ ಹೊಸಬೆಟ್ಟು ಪತ್ನಿ ಅರ್ಚನ ಹೊಸಬೆಟ್ಟು ಮಗು ಯಶಿಕಾ ಅರ್ಚನ ಇವರ ತಂದೆ ಎಚ್ ಕುಮಾರ್ ತಾಯಿ ಸುಮತಿ ಮಗ ಅಶ್ವಿನ್ ಎಚ್ ಮಣಿಂದ್ರ ಇವರ ತಂದೆ ಚಂದ್ರಸಾಲಿಯನ್ ತಾಯಿ ಮಾಲತಿ ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಪದ್ಬಾಂಧವ ಸಂಘದ ಗೌರವ ಸಲಹೆಗಾರದ ಡಾ. ರಾಜ್ ಮೋಹನ್ ರಾವ್ ಕೃಷ್ಣಮೂರ್ತಿ ಸಂಘದ ಉಪಾಧ್ಯಕ್ಷರಾದ ಮಾಜಿ ಸೈನಿಕ ಲೀಲಾಧರ್ ಕಡಂಬೋಡಿ ಸಂಘಟನಾ ಕಾರ್ಯದರ್ಶಿ ಸರೋಜ ತಾರನಾಥ್ ಶೆಟ್ಟಿ ಸ್ಥಾಪಕ ಅಧ್ಯಕ್ಷ ಉಮೇಶ್ ಇಡ್ಯಾ ಭೂಸೇನೆಯ ನಿವೃತ್ತ ಯೋಧ ಭರತ್ ಹೊಸಬೆಟ್ಟು ತಾರಾನಾಥ ಶೆಟ್ಟಿ ಧನರಾಜ್ ಹೊಸಬೆಟ್ಟು ವಿಜಿತ್ ದೇವಾಡಿಗ ಲಕ್ಷ್ಮಿ ಹೇಮಂತ್ ಹೊಸಬೆಟ್ಟು ಕವಿತಾ ಸುರತ್ಕಲ್ ಪೂರ್ವಿ ಎಚ್ ಮೆಂಡನ್ ಶ್ರೇಯಾ ಶೆಟ್ಟಿ ಉಪಸ್ಥಿತರಿದ್ದರು