ಮಂಗಳೂರು, ಅ. 28 (DaijiworldNews/AA): ಮೀನು ಸಾಗಾಟದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ, ಮಗುಚಿ ಬಿದ್ದ ಪರಿಣಾಮ ವಾಹನದಲ್ಲಿದ್ದ ಮೂವರು ಗಾಯಗೊಂಡ ಘಟನೆ ಜಪ್ಪಿನಮೊಗರು ನೇತ್ರಾವತಿ ಸೇತುವೆಯಲ್ಲಿ ಅ. 28ರ ಬೆಳಗ್ಗೆ ನಡೆದಿದೆ.

ವಾಹನದ ಚಾಲಕ ರತೀಶ್ (38), ವಾಹನದಲ್ಲಿದ್ದ ಶೈಲಜಾ (57) ಮತ್ತು ಶಾರದಾ(60) ಅವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಮೀನು ಸಾಗಾಟದ ಪಿಕಪ್ ವಾಹನ ಮಂಗಳೂರಿನಿಂದ ಕೇರಳದ ತಲಪಾಡಿ ಕಡೆಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿರ್ಲಕ್ಷ್ಯ ತನದಿಂದ ವಾಹನ ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.