ಸುಳ್ಯ, ಅ. 27 (DaijiworldNews/TA): ವಿಜಯದಶಮಿ ಹಬ್ಬದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಪಥಸಂಚಲನ ಸುಳ್ಯ ನಗರದಲ್ಲಿ ನಡೆಯಿತು.

ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡ ಪಥಸಂಚಲನ ಸುಳ್ಯ ನಗರದಲ್ಲಿ ಸಾಗಿ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿಯಿಂದ ವಾಪಾಸು ಮುಖ್ಯ ರಸ್ತೆಯಾಗಿ ಬಂದು, ರಥಬೀದಿ ರಸ್ತೆಯಾಗಿ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಸಮಾಪನಗೊಂಡಿತು.
ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮವಸ್ತ್ರದಲ್ಲಿ ಭಾಗವಹಿಸಿದ್ದರು. ಪಥಸಂಚಲನ ಸಾಗುತ್ತಿದ್ದಾಗ ರಸ್ತೆಯಲ್ಲಿ ಅಲ್ಲಲ್ಲಿ ಸಾರ್ವಜನಿಕರು ಕಾರ್ಯಕರ್ತರ ಮೇಲೆ ಹೂ ಹಾಕಿ ಸ್ವಾಗತಿಸಿದರು.