ಬಂಟ್ವಾಳ, ಅ. 26 (DaijiworldNews/TA): ತಾಲೂಕಿನ ಮಂಚಿಗ್ರಾಮದ ಶ್ರೀ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಾನಿಧ್ಯದಲ್ಲಿ ಅ.26ರಂದು ಶ್ರೀ ಮಹಾಪವಮಾನ ಯಾಗ,ಶ್ರೀ ರಾಮತಾರಕ ಯಜ್ಞ, ಸಾಮೂಹಿಕ ಗೋಪೂಜೆಯ ಧರ್ಮಜಾಗೃತಿ ಸಭೆಯು ಸಂಪನ್ನಗೊಂಡಿತು. ವಿಶ್ವ ಹಿಂದೂ ಪರಿಷತ್,ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಂಚಿ ಘಟಕ ,ಕಲ್ಲಡ್ಕ ಪ್ರಖಂಡ,ಶ್ರೀ ಮಹಾಪವಮಾನಯಾಗ ಸಮಿತಿ-2025 ಇದರ ಸಹಯೋಗದಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀಮಹಾಪವಮಾನಯಾಗ, ,ಶ್ರೀ ರಾಮತಾರಕ ಯಜ್ಞ, ಸಾಮೂಹಿಕ ಗೋಪೂಜೆಯ ನೆರವೇರಿತು.




ಡಾ.ಪ್ರಭಾಕರ ಭಟ್ ,ಡಾ.ಕಮಲಾ ಪ್ರಭಾಕರ ಭಟ್ ದಂಪತಿ ಪವಮಾನ ಪಾರಾಯಣ, ಶ್ರೀರಾಮತಾರಕ ಯಜ್ಞ ಹಾಗು ಯಾಗಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಯಾಗ ಸಮಿತಿ ಅಧ್ಯಕ್ಷ ವಿಕಾಸ್ ಕುಮಾರ್ ಪಿ., ಮೋಂತಿಮಾರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎಸ್.ಅರ್.ಸತೀಶ್ಚಂದ್ರ ಹಾಗೂ ಯಾಗ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿ.ಹಿ.ಪ. ಮಂಚಿ ಘಟಕದ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಅವರು ಯಾಗದ ಯಜಮಾನರಾಗಿ ಕಾರ್ಯ ನಿರ್ವಹಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರುಗಳಾದ ಡಾ.ವೈ.ಭರತ್ ಶೆಟ್ಟಿ,ರಾಜೇಶ್ ನಾಯ್ಕ್ ಉಳಿಪಾಡಿ,ವಿ.ಹಿಂ.ಪ.ನ ಪ್ರಾಂತಕಾರ್ಯದರ್ಶಿ ಶರಣ್ ಪಂಪ್ ವೆಲ್ ,ಮೊದಲಾದವರು ಭಾಗವಹಿಸಿದರು. ಲೋಕಕಲ್ಯಾಣಾರ್ಥ ಮತ್ತು ಸರ್ವ ದೋಷ ಪರಿಹಾರರ್ಥವಾಗಿ ಈ ಯಾಗವನ್ನು ಆಯೋಜಿಸಲಾಗಿತ್ತು... ಇದೇ ಮೊದಲಿಗೆ ಮಂಚಿಯಲ್ಲಿ ಈ ಮಹತ್ವದ ಪವಮಾನಯಾಗವನ್ನು ನಡೆದಿದ್ದು, ನಿರೀಕ್ಷೆಗೂ ಮೀರಿ ಭಗವದ್ಬಕ್ತರು ಭಾಗಿಯಾಗಿದ್ದರು.