ಬಂಟ್ವಾಳ, ಅ. 18 (DaijiworldNews/Ak): ಹಿಂದೂ ಮುಖಂಡ ಭರತ್ ಕುಮ್ಡೆಲು ಅವರ ತಂದೆ ಸೇಸಪ್ಪ ಬೆಳ್ಚಾಡ ( 75) ಅವರು ಇಂದು ಸ್ವಗೃಹದಲ್ಲಿ ಸ್ವರ್ಗಸ್ಥರಾಗಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ತಂದೆಯ ಅಂತ್ಯಕ್ರಿಯೆಗೆ ಪೋಲೀಸ್ ಬೆಂಗಾವಲಿನಲ್ಲಿ ಬಂದ ಮಗ
ಸೇಸಪ್ಪ ಬೆಳ್ಚಾಡ ಅವರ ಮಗ ಭರತ್ ಕುಮ್ಡೆಲು ಅವರು ಕೊಲೆ ಪ್ರಕರಣವೊಂದರ ಆರೋಪ ಎದುರಿಸುತ್ತಿದ್ದು ವಾರಗಳಿಂದೀಚೆಗೆ ಮಂಗಳೂರಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ಮಧ್ಯೆ ತಂದೆಯವರು ನಿಧನರಾದ ಹಿನ್ನೆಲೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ನ್ಯಾಯಾಲಯದ ಅನುಮತಿ ಪಡೆದು ಪೋಲೀಸ್ ಬೆಂಗಾವಿಲಿನಲ್ಲಿ ಮನೆಗೆ ಬಂದಿದ್ದರು.
ಭರತ್ ಕುಮ್ಡೆಲು ಅವರಿಗೆ ನ್ಯಾಯಾಲಯ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಅನುಮತಿ ನೀಡಿತ್ತು. ಹಾಗಾಗಿ ಅವರು ಸಂಜೆ 5.20 ರ ಸುಮಾರಿಗೆ ಪೋಲೀಸ್ ಬೆಂಗಾಲಿನೊಂದಿಗೆ ಮನೆಗೆ ಬಂದು ಬಳಿಕ ಬೆಂಜನಪದವು ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ರಾತ್ರಿ 8.45 ರ ಸುಮಾರಿಗೆ ಮತ್ತೆ ಪೋಲೀಸ್ ಬೆಂಗಾವಲಿನಲ್ಲಿ ಜೈಲಿಗೆ ತೆರಳಿದ್ದಾರೆ.