ಮಂಗಳೂರು, ಅ. 18 (DaijiworldNews/TA): ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಾವೂರು ಮರಕಡದ ಜ್ಯೋತಿನಗರದ ಧರ್ಮರಾಜ (60) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು 2018ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಎಲ್ಪಿಸಿ ವಾರೆಂಡ್ ಹೊರಡಿಸಿತ್ತು. ಅದರಂತೆ ಕಾವೂರು ಠಾಣೆಯ ಪೊಲೀಸರು ಮುಲ್ಕಿಯ ಪಕ್ಷಿಕರೆಯ ಕೆಂಬ್ರಾಲ್ನಿಂದ ಬಂಧಿಸಿದ್ದಾರೆ. ಆರೋಪಿಯನ್ನು 1ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಅ.29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.