ಮಂಗಳೂರು, ಅ. 18 (DaijiworldNews/AA): ಡಿಪಾರ್ಟ್ಮೆಂಟ್ ಆಫ್ ಯೂತ್ ಎಂಪವರ್ಮೆಂಟ್ ಆಂಡ್ ಸ್ಪೋರ್ಟ್ಸ್ ಮತ್ತು ಒಲಂಪಿಕ್ ಅಸೋಶಿಯೇಷನ್ ಇವರ ಸಹಯೋಗದೊಂದಿಗೆ ನವೆಂಬರ್ 3ರಿಂದ 9ರ ವರೆಗೆ ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರಿನಲ್ಲಿ 4ನೇ ಮಿನಿ ಬಾಲಕ/ಬಾಲಕಿಯರ ಕಬಡ್ಡಿ ಛಾಂಪಿಯನ್ ಶಿಪ್ಗೆ ಭಾಗವಹಿಸುವ ಕರ್ನಾಟಕ ರಾಜ್ಯದ 8 ಬಾಲಕರು 8 ಬಾಲಕಿಯರ ತಂಡಗಳಿಗೆ ಪಂದ್ಯಾಟ ನಡೆಯಲಿದೆ.

ಆ ಪ್ರಯುಕ್ತ ದ.ಕ, ಜಿಲ್ಲಾ ಕಬಡ್ಡಿ ಸಂಸ್ಥೆಯಿಂದ ಬಾಲಕ, ಬಾಲಕಿಯರ ತಂಡವನ್ನು ಕಳುಹಿಸುವಂತೆ ರಾಜ್ಯ ಕಬಡ್ಡಿ ಸಂಸ್ಥೆ ಕೇಳಿಕೊಂಡಿದೆ. ನಮ್ಮ ಜಿಲ್ಲೆಯ ಆಯ್ಕೆ ಪ್ರಕ್ರಿಯೆಯು ಅಕ್ಟೋಬರ್ 19 ರ ಭಾನುವಾರ ಸಂಜೆ 3 ಗಂಟೆಗೆ ಉರ್ವ ಒಳಾಂಗಣ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಭಾಗವಹಿಸುವವರು ಹೊಂದಿರಬೇಕಾದ ಅರ್ಹತೆ:
* 14 ವರ್ಷದ ಒಳಗಿರಬೇಕು.
* 10-11-2011 ನಂತರ ಜನಿಸಿದವರಿಗೆ ಅವಕಾಶವಿದ್ದು, ತಮ್ಮ ಆಧಾರ್ ಕಾರ್ಡ್ ಹಾಗೂ ಶಾಲೆಯ ದಾಖಲಾತಿ ತರತಕ್ಕದ್ದು.
* ಮ್ಯಾಟಿನಲ್ಲಿ ಆಯ್ಕೆ ಟ್ರಯಲ್ಸ್ ನಡೆಯುವುದರಿಂದ ಶೂ ಕಡ್ಡಾಯವಾಗಿ ತರಬೇಕು.
* ಸಮಯಕ್ಕೆ ಸರಿಯಾಗಿ ಆಗಮಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.