ಉಡುಪಿ, ಅ. 16 (DaijiworldNews/TA): ವೈಟ್ ಬೋರ್ಡ್ ಕಾರ್ ಮೂಲಕ ಬಾಡಿಗೆ ನಿರ್ವಹಿಸುತ್ತಿದ್ದ ಉಡುಪಿ ತೆಂಕನಿಡಿಯೂರು ನಿವಾಸಿ ಆರ್. ರಶೀದ್ ವಿರುದ್ಧ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




ಠಾಣೆಯ ಪೊಲೀಸ್ ಉಪ ನಿರೀಕ್ಷಕ ಅನಿಲ್ ಕುಮಾರ್ ಡಿ. ಅವರಿಗೆ ಜಿಲ್ಲಾ ಟ್ಯಾಕ್ಸಿ ಮನ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಸಂಘದವರ ಮನವಿಯಂತೆ, ಮಲ್ಪೆ ಮತ್ತು ಉಡುಪಿ ಪರಿಸರದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅಧಿಕೃತ ಪರವಾನಿಗೆ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ತಂಡ ರಶೀದ್ ಎಂಬವರ ಮನೆಯಲ್ಲಿ ನಿಲ್ಲಿಸಿರುವ ಕಾರುಗಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 18 ವಿವಿಧ ಮಾದರಿಯ ವೈಟ್ ಬೋರ್ಡ್ ಕಾರುಗಳು ನಿಲ್ಲಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಆರ್. ರಶೀದ್ ಬಳಿ ವಿಚಾರಿಸಿದಾಗ, ತಾನು ಈ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವುದಾಗಿ, ಬಾಡಿಗೆ ನೀಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರ್ಮಿಟ್ ಇಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಪ್ರಾಧಿಕಾರದಿಂದ ಪರ್ಮಿಟ್ ಪಡೆಯದೇ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವ ಆರೋಪಿ ಆರ್. ರಶೀದ್ ಮೇಲೆ ಪ್ರಕರಣ ದಾಖಲಿಸಲಾಗಿದೆ.