ಬಂಟ್ವಾಳ, ಅ. 16 (DaijiworldNews/AK): 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ತಾಲೂಕು ಪೊಲೀಸರು ಬಂಧಿಸಿದ್ದಾರೆ.

ಸಜಿಪ ಮೂಡ ಗ್ರಾಮದ ವಾರೆಂಟ್ ಆರೋಪಿ ಫಾರೂಕ್@ಉಮ್ಮರ್ ಫಾರೂಕ್ (32), ಎಂದು ಗುರುತಿಸಲಾಗಿದೆ. ಅ.15 ರಂದು ಬಂಟ್ವಾಳ ತಾಲೂಕಿನ ಮದ್ವ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ ನಂ:38/20 ಕಲಂ: 457,380 IPC ,39/2020 ಕಲಂಃ 380,201, 34 IPC , 48/2012 ಕಲಂಃ 379,201,34 IPC , 119/2020 ಕಲಂಃ 457,380 IPC , ಕಡಬ ಪೊಲೀಸ್ ಠಾಣಾ ಅ.ಕ್ರ 43/2020,44/2020,45/2020,46/2020 ಕಲಂಃ 457,380 IPC ಮತ್ತು ವಿಟ್ಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಕೋಣಾಜೆ, ಬರ್ಕೆ, ಬಜಪೆ ಪೊಲೀಸ್ ಠಾಣೆಗಳಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿದೆ.