ಮಂಗಳೂರು, ಅ. 13 (DaijiworldNews/AK): ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ನಗರ ವತಿಯಿಂದ ವಿಜಯ ದಶಮಿ ಪಥ ಸಂಚಲನ ಭಾನುವಾರ ಸಂಜೆ ನಗರದಲ್ಲಿ ನಡೆಯಿತು.



ರಾಮಕೃಷ್ಣಶಾಲಾ ಮೈದಾನ, ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಆರಂಭವಾಗಿ ಕರಂಗಲಪಾಡಿ, ಮಾರ್ಕೆಟ್ ರಸ್ತೆ, ಸುಬ್ರಹ್ಮಣ್ಯ ಸದನ, ಕೊಡಿಯಾಲಗುತ್ತು ರಸ್ತೆ, ಎಸ್ಡಿಎಂ ಕಾನೂನು ಕಾಲೇಜು ರಸ್ತೆ, ಪಿವಿಎಸ್, ಮಂಜೇಶ್ವರ ಗೋವಿಂದ ಪೈ ವೃತ್ತವಾಗಿ ಶಾರದಾ ವಿದ್ಯಾಲಯದ ಮೈದಾನದಲ್ಲಿ ಸಮಾಪನಗೊಂಡಿತು.
ಈ ಪಥ ಸಂಚಲನದಲ್ಲಿ ಭಾರೀ ಸಂಖ್ಯೆಯಲ್ಲಿ ಸ್ವಯಂಸೇವಕರು ಭಾಗವಹಿಸಿದ್ದರು.