ಪುತ್ತೂರು, ಅ. 12 (DaijiworldNews/AA): ಶಾಂತಿಗೋಡು ಗ್ರಾಮದ ನೆಕ್ಲರೆ ಆನಡ್ಕದಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟವರನ್ನು ದಿನಗೂಲಿ ಕಾರ್ಮಿಕರಾದ ವಾಮನ ನಾಯ್ಕ (40) ಎಂದು ಗುರುತಿಸಲಾಗಿದೆ.
ವಾಮನ ಅವರು ಕೆಲಸ ಮುಗಿಸಿ ಸಂಜೆ 5.40ರ ಸುಮಾರಿಗೆ ಮನೆಗೆ ಹಿಂದಿರುಗಿದ್ದರು. ಅವರು ಮನೆಯ ಮುಂದೆ ಕುಳಿತಿದ್ದಾಗ ಸಿಡಿಲು ಬಡಿದು, ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.