ಸುಳ್ಯ, ಅ. 12(DaijiworldNews/TA): ದ.ಕ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತಿದ್ದು ವಾಣಿಜ್ಯ ಬೆಳೆಯಿಂದ ಆಹಾರ ಬೆಳೆಯನ್ನು ಬೆಳೆಯಲು ಮನಸು ಮಾಡಬೇಕೆಂದು ಎಂದು ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೆಶಕ ಶಿವಶಂಕರ ದಾನಗೊಂಡರ್ ಹೇಳಿದರು. ದ.ಕ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸುಳ್ಯ ಇದರ ವತಿಯಿಂದ ಸುಳ್ಯ ಕೃಷಿ ಇಲಾಖೆಯಲ್ಲಿ ಅ.11ರಂದು ನಡೆದ ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ ಕುಸುಮಾಧರ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಧಾನಿಯವರ ಯೋಜನೆಗೆ ಪೂರಕವಾಗಿ ಸುಳ್ಯ ತಾಲೂಕಿನಲ್ಲಿ ಹಡಿಲು ಬಿದ್ದ ಒಂದಷ್ಟು ಗದ್ದೆಗಳನ್ನು ಕೃಷಿಕ ಸಮಾಜದ ನೇತ್ರತ್ವದಲ್ಲಿ ಬೇಸಾಯ ಮಾಡಲಾಗುವುದೆಂದು ಹೇಳಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ಚಂದ್ರಾ ಕೋಲ್ಚಾರ್,ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸುಳ್ಯ ತಾಲೂಕಿನ ಸಹಕಾರಿ ಸಂಘದ ಆಧ್ಯಕ್ಷಕರು, ಕಾರ್ಯನಿರ್ವಾಹಣಾಧಿಕಾರಿಗಳು, ಸಿಬ್ಬಂದಿ, ಗೊಬ್ಬರ ಏಜೆಂಟ್ ಗಳು ಭಾಗವಹಿಸಿದರು.