ಬಂಟ್ವಾಳ, ಅ. 12(DaijiworldNews/TA): ಅರಣ್ಯ ಇಲಾಖೆಯ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಕರ್ನಾಟಕ ಸರಕಾರದಿಂದ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಂಗಳೂರು ವಿಭಾಗದ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರು ಸಿಎಂ ಸಿದ್ದರಾಮಯ್ಯರವರಿಂದ ಬೆಂಗಳೂರಿನ ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ಸ್ವೀಕರಿಸಿದರು. ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರು ಮಂಗಳೂರಿನ ಕುಳಾಯಿ ಚಿತ್ರಾಪುರದ ನಿವಾಸಿಯಾದ ಯಾಧವ ಪುತ್ರನ್ ಹಾಗೂ ಸೇವಂತಿ ಕಾಂಚನ ಅವರ ಪುತ್ರ.



ಜಿತೇಶ್.ಪಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು NMPT ಸ್ಕೂಲ್ ನಲ್ಲಿ ಪೂರ್ಣಗೊಳಿಸಿದರು. ಸುಮಾರು 20 ವರ್ಷಗಳ ಕಾಲ ಪಂಜ ಮಂಗಳೂರು, ಬಂಟ್ವಾಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಂಟ್ವಾಳ ವಲಯದಲ್ಲಿ ಗಸ್ತು ಪಾಲಕನಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಬಂಟ್ವಾಳ ಸರಕಾರಿ ನೌಕರರ ಸಂಘದ ನಾಮ ನಿರ್ದೇಶಿತ ಸದಸ್ಯನಾಗಿ ಸಂಘದಲ್ಲಿ ಕ್ರೀಡಾ ಕಾರ್ಯದರ್ಶಿ ಆಗಿಯೂ ಹಾಗೂ ಮಂಗಳೂರು ವಿಭಾಗದ ಗಸ್ತು ಪಾಲಕ ಹಾಗೂ ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.