ಉಡುಪಿ,ಅ. 10 (DaijiworldNews/AK): ದೀಪಾವಳಿ ಹಬ್ಬದ ಪ್ರಯುಕ್ತ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ ವತಿಯಿಂದ ಹಮ್ಮಿಕೊಳ್ಳಲಾದ ಕೆನರಾ ರಿಟೈಲ್ ಮೇಳ-2025 ರ ಕಾರ್ಯಕ್ರಮದ ಮುಂಚಿತವಾಗಿ ಭವ್ಯ ಮೆರವಣಿಗೆ ನಡೆಯಿತು.

ಕೆನರಾ ರಿಟೈಲ್ ಮೇಳ ಮೇಳ-2025 ಅಕ್ಟೋಬರ್ 11 ಮತ್ತು 12 ರಂದು ನಡೆಯಲಿದ್ದು, ಅದರಂತೆ ಅಕ್ಟೋಬರ್ 10 ರಂದು ಭವ್ಯ ಮೆರವಣಿಗೆ ನಡೆಯಿತು. ಕೆನರಾ ಬ್ಯಾಂಕ್ ಸರ್ಕಲ್ ಕಚೇರಿ ಮಣಿಪಾಲದ ಪ್ರಧಾನ ವ್ಯವಸ್ಥಾಪಕ ಎಚ್. ಕೆ. ಗಂಗಾಧರ ರೋಡ್ ಶೋಗೆ ಚಾಲನೆ ನೀಡಿದರು.
ಕರಾವಳಿ ಬೈಪಾಸ್ ನಿಂದ ಭವ್ಯ ಮೆರವಣಿಗೆ ಪ್ರಾರಂಭವಾಗಿ ಮಣಿಪಾಲದಲ್ಲಿನ ಕೆನರಾ ಬ್ಯಾಂಕ್ ಸರ್ಕಲ್ ಕಚೇರಿ ಬಳಿ ಸಮಾಪನಗೊಂಡಿತು. ಈ ಸಂದರ್ಭ ಚಾಲನೆ ನೀಡಿ ಮಾತನಾಡಿದ ಕೆನರಾ ಬ್ಯಾಂಕ್ ಮಹಾಪ್ರಭಂಧಕ ಎಚ್. ಕೆ. ಗಂಗಾಧರ, ದೀಪಾವಳಿ ಹಬ್ಬದ ಸಮಯದಲ್ಲಿ ಜನರು ಮನೆ ಮತ್ತು ಕಾರು ಖರೀದಿಗೆ ಆಸಕ್ತಿ ತೋರಿಸುತ್ತಾರೆ. ಆದ್ದರಿಂದ ನಾವು ಅಕ್ಟೋಬರ್ 11 ಮತ್ತು 12 ರಂದು ಎಂಜಿಎಮ್ ಕಾಲೇಜು ಮೈದಾನದಲ್ಲಿ ಕೆನರಾ ರಿಟೈಲ್ ಮೇಳವನ್ನು ಆಯೋಜಿಸಿದ್ದೇವೆ. ಈ ಕಾರ್ಯಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಭವ್ಯ ಮೆರವಣಿಗೆಯನ್ನು ನಡೆಸಲಾಗಿದೆ. 40 ಕ್ಕೂ ಹೆಚ್ಚು ವಾಹನ ಡೀಲರ್ ಗಳು ಈ ರೋಡ್ ಶೋದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಉಡುಪಿ ಪ್ರಾದೇಶಿಕ ಕಚೇರಿಯ ಡಿ.ಜಿ.ಎಂ ರೀಜನಲ್ ಆಫಿಸ್ ಉಡುಪಿ ಮಹಾಮಾಯಾ ಪ್ರಸಾದ್, ಡಿಎಂ ರೀಜನಲ್ ಆಫಿಸ್ ಉಡುಪಿ ಅರ್ಚನಾ, ಡಿ ಎಂ ಎಸ್ಸೆಟ್ಸ್ ಹಬ್ ಉಡುಪಿ .ಕೌಶಿಕ್ ರೆಡ್ಡಿ,,, ಸರ್ಕಲ್ ಕಚೇರಿಯ ಡಿಜಿಎಂ ಪವಿತ್ರಕುಮಾರ್ ದಾಸ್, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಸೀನಿಯರ್ ಮ್ಯಾನೆಜರ್ ಸೂರಜ್ ಆರ್. ಉಪ್ಪೂರು ಮತ್ತು ಶ್ರೀದುರ್ಗಾ ಪ್ರಸಾದ್, ಡೀಲರ್ ಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.